ಪೆರ್ಲ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಅಕ್ಟೋಬರ್ 25 ರಂದು ಸಂಜೆ ಶ್ರೀ ರಾಮಮಂದಿರದ ರಂಗಮಂಟಪದಲ್ಲಿ ಭಾಗವತಿಕೆಯಲ್ಲಿ ಡಾಕ್ಟರೇಟ್ ಪದವಿ ಪಡೆದ ಸತೀಶ ಪುಣಿಚಿತ್ತಾಯ ಮತ್ತು ತಂಡದವರಿಂದ ವಾಲಿಮೋಕ್ಷ ಎಂಬ ಯಕ್ಷಗಾನ ಪ್ರಸಂಗ ಪ್ರಪ್ರಥಮ ಬಾರಿಗೆ ಅಯೋಧ್ಯೆಯಲ್ಲಿ ಪ್ರದರ್ಶನಗೊಂಡಿತು.
ಅಯೋಧ್ಯ ರಾಮ ಮಂದಿರ ನಿರ್ಮಾಣ ಸಮಿತಿಯ ಉಸ್ತುವಾರಿಗಳೂ, ವಿಶ್ವಹಿಂದೂ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ಜಿ, ಟಾಟಾ ಸಂಸ್ಥೆಯ ಉನ್ನತ ಅಧಿಕಾರಿ, ಎಲ್ ಅಂಡ್ ಟಿ ಸಂಸ್ಥೆಯ ಮತ್ತೊಬ್ಬ ಉನ್ನತ ಅಧಿಕಾರಿ ಹಾಗೂ ಮಂದಿರ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಹಲವು ಕಾರ್ಮಿಕರೊಂದಿಗೆ ಕನ್ನಡ ಭಾಷೆಯದ್ದಾದರೂ ಅತ್ಯಂತ ಕುತೂಹಲದಿಂದ ನಿರಂತರ 3 ಗಂಟೆಗಳ ಕಾಲ ಯಕ್ಷಗಾನ ಪ್ರಸಂಗವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು..ಟಾಟಾ ಸಂಸ್ಥೆಯ ಅಧಿಕಾರಿಗಳು ಸದ್ಯೋಭವಿಷ್ಯದಲ್ಲಿ ಯಕ್ಷಗಾನವನ್ನು ಹಿಂದಿಯಲ್ಲೂ ಮಾಡಬೇಕೆಂಬ ಸಲಹೆ ನೀಡಿ ಉತ್ಸಾಹ ತುಂಬಿದರು.
ತಂಡದಲ್ಲಿ ಭಾಗವತರಾಗಿ ಡಾ.ಸತೀಶ್ ಪುಣಿಚಿತ್ತಾಯ ಪೆರ್ಲ, ಚೆಂಡೆ-ಮದ್ದಳೆಯಲ್ಲಿ ಸಮೃದ್ಧ ಪುಣಿಚಿತ್ತಾಯ, ಮುರಳಿಧರ ಭಟ್ಯಮೂಲೆ, ಪಾತ್ರವರ್ಗದಲ್ಲಿ ವಾಲಿಯಾಗಿ ವಿನೋದ್ ಕುಮಾರ್ ಪೆರ್ಲ, ಸುಗ್ರೀವನಾಗಿ ಭವಿಷ್ ಭಂಡಾರಿ ಪುತ್ತೂರು, ರಾಮನಾಗಿ ಶೇಣಿ ವೇಣುಗೋಪಾಲ ಭಟ್ ಪಾತ್ರಪೋಷಣಗೈದರು.

.jpg)
