ಕಾಸರಗೋಡು: ತೆಕ್ಕಿಲ್‍ಪರಂಬದ ಹಿರಿಯಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕಾಸರಗೋಡು ಉಪಜಿಲ್ಲಾ ಶಾಲಾಕಲೋತ್ಸವದಲ್ಲಿ ಕೂಡ್ಲು ಶ್ರೀಗೋಪಾಲಕೃಷ್ಣ ಪ್ರೌಢಶಾಲೆಯ ಹತ್ತನೇತರಗತಿಯ ವಿದ್ಯಾರ್ಥಿನಿ ಶಿವಾನಿ ಕೂಡ್ಲು ಭಾಗವಹಿಸಿದ ನಾಲ್ಕು ವೈಯಕ್ತಿಕ ವಿಭಾಗದ ಸ್ಪರ್ದೆ, ಒಂದು ಗುಂಪು ಸ್ಪರ್ಧೆಯಲ್ಲಿ'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಶಾಲಾ ಕಲೋತ್ಸವಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಈಕೆ ಕೇರಳ ನಟನಂ ನೃತ್ಯ, ಕನ್ನಡ ಕಂಠಪಾಠ, ಸಂಸ್ಕøತ ವಿಭಾಗದ ಚಂಪೂ ಪ್ರಭಾಷಣ, ಸಂಸ್ಕøತ ಭಾಷಣ ಮತ್ತು ಯಕ್ಷಗಾನದಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.


