ಕಾಸರಗೋಡು: ಮೊಗ್ರಾಲ್ ಸನಿಹದ ದೇಶಮಂಗಲ ಶ್ರೀ ಕಾಳಿಕಾ ವಿಶ್ವಕರ್ಮ ಭಜನಾ ಮಂದಿರ ವಠಾರದ ಓಂಕಾರ ಧ್ವಜ ಅಳವಡಿದಿದ ಧ್ವಜಸ್ತಂಬವನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದು, ವ್ಯಾಪಕ ವಿರೋಧ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಮೀಳ ಮಜಲ್, ಉದಯ ಅಮ್ಚಿಕೆರೆ, ಮುಜೀಬ್ ಕಂಬಾರು, ವಿವಿಧ ರಾಜಕೀಯ ಪಕ್ಷಗಳ ನೇತಾರರು ಸ್ಥಳಕ್ಕೆ ಭೇಟಿ ನೀಡಿದರು.
ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನುಕ್ರಮ ಕೈಗೊಳ್ಳುವಂತೆ ಭಜನಾ ಮಂದಿರ ಸಮಿತಿ ಪದಾಧಿಕಾರಿಗಳು ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿ, ಕಾಸರಗೋಡು ಜಿಲ್ಲಾಧಿಕಾರಿ, ಉಪವಿಭಾಗೀಯ ದಂಡಾಧಿಕಾರಿಯನ್ನು ಆಗ್ರಹಿಸಿದ್ದಾರೆ.
ಪ್ರತಿಭಟನಾ ಸಭೆ:
ಧ್ವಜಸ್ತಂಬಕ್ಕೆ ಹಾನಿಗೊಳಿಸಿದ ಘಟನೆ ಖಂಡಿಸಿ ದೇವಾಲಯ ವಠಾರದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಮಂದಿರ ಸಮಿತಿ ಅಧ್ಯಕ್ಷ ನರೇಂದ್ರ ಆಚಾರ್ಯ ದೇಶಮಂಗಲ ಅಧ್ಯಕ್ಷತೆ ವಹಿಸಿದ್ದರು. ಮಂದಿರದ ಸ್ಥಾಪಕ ಪದಾಧಿಕಾರಿ ಎಂ.ಪುರುಷೋತ್ತಮ ಆಚಾರ್ಯ ಕಂಬಾರು, ಶ್ರೀ ಆಂಜನೇಯ ಕ್ಷೇತ್ರದ ಶ್ರೀ ಆಂಜನೇಶ್ವರ ಸ್ವಾಮೀಜಿ ದೇಶಮಂಗಲ, ಪಂಚಾಯತ್ ಸದಸ್ಯರಾದ ಉದಯ ಅಮ್ಚಿಕೆರೆ, ಸಂಪತ್ ಪೆರ್ನಡ್ಕ , ಪ್ರಸನ್ನ ಕಾರಂತ ದೇಶಮಂಗಲ , ಲೋಕೇಶ್ ಎಂ.ಬಿ ಆಚಾರ್ ಕಂಬಾರು, ಚಂದ್ರಶೇಖರ ಬಳ್ಳೂರು, ಭುವನೇಶ್ ಆಚಾರ್ಯ ತಾಳಿಪಡ್ಪು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಪಂಜಿನ ಮೆರವಣಿಗೆ ನಡೆಸಿ ಶ್ರೀಗುಳಿಗ ದೈವ ಸಾನಿಧ್ಯದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.


