ಕಾಸರಗೋಡು : ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ನ. 10ರಂದು ನಡೆಯಲಿರುವ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಚಪ್ಪರ ಮುಹೂರ್ತ ಗುರುವಾರ ಜರುಗಿತು. ಧಾರ್ಮಿಕ , ಸಾಂಸ್ಕೃತಿಕ,ಕನ್ನಡ ಪರ ಹೋರಾಟಗಾರ ಡಾ.ವೆಂಕಟರಮಣ ಹೊಳ್ಳ ಕಾಸರಗೋಡು ಚಪ್ಪರ ಮುಹೂರ್ತ ನೆರವೇರಿಸಿದರು.
ಕಾಸರಗೋಡು ನಗರ ಸಭಾ ಕೌನ್ಸಿಲರ್ ಶಾರದಾ ಜೆ. ಪಿ ನಗರ ಅಧ್ಯಕ್ಷತೆ ವಹಿಸಿದರು. ಹೋಟೆಲ್ ಉದ್ಯಮಿ ರಾಮಪ್ರಸಾದ್ ಕಾಸರಗೋಡು, ಚಪ್ಪರ ಕಾಂಟ್ರಾಕ್ಟ್‍ರ್ ಲವ.ಕೆ ಮೀಪುಗುರಿ, ಜಯಾನಂದ ಕುಮಾರ್ ಅನಂತಪುರ, ರಘು.ಕೆ ಮೀಪುಗುರಿ, ದಿವಾಕರ. ಪಿ. ಅಶೋಕ್ ನಗರ, ಕೆಸಿಎನ್ ವ್ಯಾನೆಲ್ ನಿರ್ದೇಶಕ ಪುರುಷೋತ್ತಮ ಎಂ ನಾಯ್ಕ್, ನಗರಸಭಾ ಮಾಜಿ ಸದಸ್ಯ ಶಂಕರ ಕೆ, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಜಗನ್ನಾಥ. ಶೆಟ್ಟಿ. ಪಿ .ಕೆ, ಕುಶಲ ಕುಮಾರ. ಕೆ ಕನ್ನಡ ಗ್ರಾಮ, ರಾಷ್ಟ್ರ ಪತಿ ಪ್ರಶಸ್ತಿ ಪುರಸ್ಕೃತ ಅಧ್ಯಾಪಕ ಸತೀಶ್ ಕೆ ಕೂಡ್ಲು, ಕಾವ್ಯ ಕುಶಲ, ರಾಧಾ ಶಿವರಾಮ, ಸವಿತಾ ಕಿಶೋರ್, ಕೃಪಾ, ಅನುಷ ಉಪಸ್ಥಿತರಿದ್ದರು.
ಕರ್ಣಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ ಕೂಡ್ಲು ವಂದಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ,ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ,ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2024 ನವೆಂಬರ್ 10ರಂದು ಸಮ್ಮೇಳನ ನಡೆಯಲಿದೆ.


