ಕಾಸರಗೋಡು: ವ್ಯಾಪಾರಿಯೊಬ್ಬರು ಬ್ಯಾಂಕ್ ಖಾತೆಗೆ ಪಾವತಿಸಿದ 354200ರೂ. ಮೊತ್ತದಲ್ಲಿ 500ರೂ. ಮುಖಬೆಲೆಯ ಐದು ಖೋಟಾನೋಟು ಪತ್ತೆಯಾಘಿದ್ದು, ಈ ಬಗ್ಗೆ ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಗರದ ಎಂ.ಜಿ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಪ್ರಬಂಧಕಿ ಲತಿಕಾ ಎಂ. ಅವರ ದಊರಿನ ಮೇರೆಗೆ ಈ ಕೇಸು ದಾಖಲಾಗಿದೆ.
ವ್ಯಾಪಾರಿ ಸಂಸ್ಥೆ ಹೆಸರಲ್ಲಿರುವ ಖಾತೆಗೆ ಇ.ಕೆ ಮುನಾವಿರ್ ಎಂಬವರು ಪಾವತಿಸಿದ ಈ ಹಣದಲ್ಲಿ ಖೋಟಾನೋಟು ಪತ್ತೆಯಾಗಿದೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ.

