ಬದಿಯಡ್ಕ: ಕುಸಿದು ಬಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕನ್ನೆಪ್ಪಾಡಿ ಬಳಿಯ ಓಣಿಯಡ್ಕ ನಿವಾಸಿ ದಿ. ಕೃಷ್ಣ ನಾಯ್ಕ-ತಿರುಮಲೇಶ್ವರೀ ದಂಪತಿ ಪುತ್ರ ರವಿ(42) ಮೃತಪಟ್ಟಿದ್ದಾರೆ. ಪೇಂಟಿಂಗ್ ಕಾರ್ಮಿಕರಾಗಿದ್ದ ರವಿ ಅವರು ನೀರ್ಚಾಲು ಪೇಟೆಯಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಇವರನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೂ ಅನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ.


