ಶಬರಿಮಲೆ: ಮಂಡಲ ಪೂಜೆಗೂ ಮುನ್ನ ಆರನ್ಮುಳ ಪಾರ್ಥಸಾರಥಿ ದೇವಸ್ಥಾನದಿಂದ ನಿನ್ನೆ ಸಂಜೆ ಮೆರವಣಿಗೆ ಮೂಲಕ ಸನ್ನಿಧಾನಕ್ಕೆ ಕರೆತಂದ ತಂಗಅಂಕಿಗೆ(ವಿಶೇಷ ವಸ್ತ್ರಾಭರಣ)À ಭಕ್ತರು ಭಕ್ತಿಪೂರ್ವಕ ಸ್ವಾಗತ ಕೋರಿದರು. ಬಳಿಕ ಶಬರಿಶನಿಗೆ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
1973 ರಲ್ಲಿ, ತಿರುವಾಂಕೂರಿನ ಮಹಾರಾಜರಾದ ಶ್ರೀ ಚಿತ್ತಿರತಿರುನಾಳ್ ಬಲರಾಮ ವರ್ಮ ಅವರು ಮಂಡಲ ಪೂಜೆಗಾಗಿ 451 ಪವನ್ ತಂಗಅಂಗಿತಯಾರಿಸಿದ್ದರು.
18ನೇ ಮೆಟ್ಟಿಲು ಮೇಲೆ ದೇವಸ್ವಂ ಇಲಾಖೆ ಸಚಿವ ವಿ.ಎನ್.ವಾಸವನ್, ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್, ದೇವಸ್ವಂ ಮಂಡಳಿ ಸದಸ್ಯರಾದ ಎ. ಅಜಿಕುಮಾರ್, ಜಿ. ಸುಂದರೇಶನ್ ನೇತೃತ್ವದಲ್ಲಿ ತಂಗಅಂಗಿಯನ್ನು ಸ್ವಾಗತಿಸಲಾಯಿತು.
ಎಡಿಜಿಪಿ ಎಸ್. ಶ್ರೀಜಿತ್, ಎ.ಡಿ.ಎಂ. ಅರುಣ್ ಎಸ್. ನಾಯರ್, ಸನ್ನಿಧಾನಂ ವಿಶೇಷಾಧಿಕಾರಿ ಬಿ. ಕೃಷ್ಣಕುಮಾರ್ ಉಪಸ್ಥಿತರಿದ್ದರು. ತಮಿಳುನಾಡು ದೇವಸ್ವಂ ಸಚಿವ ಪಿ.ಕೆ. ಶೇಖರ್ ಬಾಬು ಕೂಡ ತಂಗಅಂಗಿ ವೀಕ್ಷಿಸಲು ಆಗಮಿಸಿದ್ದರು. ನಂತರ ತಂತ್ರಿ ಕಂಠಾರರ್ ರಾಜೀವ್, ಮೇಲ್ಶಾಂತಿ ಅರುಣಕುಮಾರ ನಂಬೂದಿರಿ ಜೊತೆಯಾಗಿ ಸೋಪಾನ ಮಾಡಿ ತಂಗಅಂಗಿಯನ್ನು ಗರ್ಭಗುಡಿಯೊಳಗೆ ಕೊಂಡೊಯ್ದರು. ಸಂಜೆ 6:30ಕ್ಕೆ ಮಹಾ ದೀಪಾರಾಧನೆ ನಡೆಯಿತು. ನಂತರ ಭಕ್ತರಿಗೆ ವಿರಾಜಮಾನರಾಗಿದ್ದ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ನಿನೆ ಮಧ್ಯಾಹ್ನ ಪಂಪಾ ತಲುಪಿದ ತಂಗಅಂಗಿ ವಸ್ತ್ರದ ಮೆರವಣಿಗೆಯನ್ನು ದೇವಸ್ವಂ ಇಲಾಖೆ ಸಚಿವ ವಿ.ಎನ್.ವಾಸವನ್ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ತಂಗ ವಸ್ತ್ರದ ಮೆರವಣಿಗೆ ಮೂರು ಗಂಟೆಗೆ ಸನ್ನಿಧಾನಕ್ಕೆ ಆಗಮಿಸಿತು. ದೇವಸ್ವಂ ಮಂಡಳಿ ಸಂಜೆ 5.20ಕ್ಕೆ ಸರಂಕುತ್ತಿಗೆ ತಲುಪಿ ಅಧಿಕೃತ ಸ್ವಾಗತ ನೀಡಿತು. ಎ.ಡಿ.ಎಂ. ಅರುಣ್ ಎಸ್. ನಾಯರ್, ಕಾರ್ಯನಿರ್ವಹಣಾಧಿಕಾರಿ ಮುರಾರಿ ಬಾಬು, ಆಡಳಿತಾಧಿಕಾರಿ ಬಿಜು ವಿ. ನಾಥ್ ಅವರ ತಂಡ ಸರಂಕುತ್ತಿ ತಂಗ ವಸ್ತ್ರದ ಮೆರವಣಿಗೆಯನ್ನು ಸ್ವಾಗತಿಸಿ ಸನ್ನಿಧಾನಕ್ಕೆ ಕರೆದೊಯ್ದರು.


.jpeg)
