ಕುಂಬಳೆ ಶಿರಿಯದ ಡಿಎಂ ಕಬಾನ ರೆಸಾರ್ಟ್ ನಲ್ಲ ಗುರುವಾರ ಆಯೋಜಿಸಲಾದ ಕೆಜೆಯು ಜಿಲ್ಲಾ ಸಮ್ಮೇಳನದ ಪ್ರತಿನಿಧಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಪತ್ರಕರ್ತರ ಕ್ಷೇಮನಿಧಿ ಸಂಬಂಧ ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿ ರಾಜ್ಯ ಸಮಿತಿ ಸಂಪರ್ಕದಲ್ಲಿದೆ. ಮೀಸಲಿಟ್ಟ ಎರಡು ಕೋಟಿ.ರೂ.ಗಳ ವಿನಿಯೋಗದಲ್ಲಿ ದಶಕದಿಂದಲೂ ಸರ್ಕಾರ ಯಾವುದೇ ಕ್ರಮ ಕ್ಯೆಗೊಂಡಿಲ್ಲ. ಆದರೂ ಪ್ರಯತ್ನ ಮುಂದುವರಿದಿದೆ ಎಂದರು.
ಗ್ರಾಮೀಣ ಪತ್ರಕರ್ತರ ಎಲ್ಲಾ ನೋವು-ನಲಿವುಗಳಿಗೆ ಆಶ್ರಯವಾಗಿ ಸಂಘಟನೆ ಇರುತ್ತದೆ. ಕ್ಷೇಮನಿಧಿಯಂತಹ ಸರ್ಕಾರ ಕೃಪಾಪೋಶಿತ ನೆರವುಗಳಿಗೆ ಇನ್ನಿಲ್ಲದೆ ಪ್ರಯತ್ನಿಸಲಾಗುತ್ತಿದೆ ಎಂದರು.
ಪತ್ತನಂತಿಟ್ಟ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಮಾತ್ರವಿರುವ ಸಹಕಾರಿ ಸಂಘ ಈಗಾಗಲೇ ಇತರೆಡೆಗಳಿಗೆ ಮಾದರಿಯಾಗುವಂತೆ ಕಾರ್ಯವೆಸಗುತ್ತಿದೆ. ಇದು ಇತರ ಜಿಲ್ಲೆಗಳಿಗೂ ವಿಸ್ತರಿಸಲಿದೆ ಎಂದರು.

