ಕೊಚ್ಚಿ: ಪೆರಿಯ ಜೋಡಿ ಕೊಲೆ ತೀರ್ಪು ಸಂದರ್ಭದಲ್ಲಿ ನಾಟಕೀಯ ದೃಶ್ಯಗಳು ನ್ಯಾಯಾಲಯದಲ್ಲಿ ಕಂಡುಬಂತು. ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ, ಸಾಕಷ್ಟು ನೊಂದಿದ್ದೇನೆ ಈಗ ಸತ್ತರೆ ಸಾಕು ಎಂದೆನಿಸಿದೆ ಎಂದು ಪ್ರಕರಣದ 15ನೇ ಆರೋಪಿ ಎ. ಸುರೇಂದ್ರನ್ (ವಿಷ್ಣು ಸುರ). ನ್ಯಾಯಾಧೀಶ ಎನ್. ಶೇμÁದ್ರಿನಾಥನ್ ಅವರ ಮುಂದೆ ಆರೋಪಿಗಳ ಮನವಿ ಅಳಲು ತೋಡಿಕೊಂಡರು.
ಪಿತೂರಿ ಮತ್ತು ಆರೋಪಿಗಳು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಕೌಟುಂಬಿಕ ಸಮಸ್ಯೆಗಳು ಮತ್ತು ವಯಸ್ಸಾದ ಪೋಷಕರು ಮತ್ತು ಚಿಕ್ಕ ಮಕ್ಕಳನ್ನು ಹೊಂದಿರುವ ಕಾರಣದಿಂದ ಶಿಕ್ಷೆಯಲ್ಲಿ ಮೃದುತ್ವವನ್ನು ಕೋರಿದರು. ಪೆರಿಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಹತ್ಯೆ ಪ್ರಕರಣದಲ್ಲಿ 14 ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ಇಂದು ತೀರ್ಪು ನೀಡಿದೆ. ಅವರ ಶಿಕ್ಷೆಯನ್ನು ಮುಂದಿನ ಶುಕ್ರವಾರ ಪ್ರಕಟಿಸಲಾಗುವುದು.
ಈ ತೀರ್ಪು ಕೊಚ್ಚಿಯ ವಿಶೇಷ ಸಿಬಿಐ ನ್ಯಾಯಾಲಯ ನೀಡಿದ್ದು, ಸಿಪಿಎಂ ನಾಯಕರು ಸೇರಿದಂತೆ 24 ಆರೋಪಿಗಳಿದ್ದರು. 1 ರಿಂದ 8 ಆರೋಪಿಗಳ ಮೇಲೆ ಕೊಲೆ ಆರೋಪವಿದೆ. ಮಾಜಿ ಶಾಸಕ ಕೆ.ವಿ.ಕುಂಞÂ್ಞ ರಾಮನ್ ಸೇರಿದಂತೆ 20ನೇ ಆರೋಪಿಗಳು ತಪ್ಪಿತಸ್ಥರು. ನ್ಯಾಯಾಲಯ 10 ಆರೋಪಿಗಳನ್ನು ಖುಲಾಸೆಗೊಳಿಸಿದೆ. 9, 11, 12, 13, 16, 18, 17, 19, 23 ಮತ್ತು 24 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.


