ಬದಿಯಡ್ಕ: ವಿದ್ಯಾಗಿರಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಬೆಳ್ಳಿ ಛಾಯಾಚಿತ್ರ ಪ್ರತಿಷ್ಠೆ ಬುಧವಾರ ಕುಂಭಲಗ್ನ ಶುಭ ಮುಹೂರ್ತದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಗಣೇಶ್ ಭಟ್ ಮುಂಡೋಡು ಅವರ ನೇತೃತ್ವದಲ್ಲಿ ಗುರುಸ್ವಾಮಿ ರಮೇಶ್ ಆಳ್ವ ಮತ್ತು ಶಿಷ್ಯವೃಂದದವರಿಂದ ನಡೆಯಿತು.
ಊರ ಪರವೂರ ಅಯ್ಯಪ ಭಕ್ತರ ಶರಣಂ ಘೋಷಣೆ, ಭಕ್ತಿಭಾವಗಳೊಂದಿಗೆ ಕಾರ್ಯಕ್ರಮ ನಡೆಯಿತು. ವಿವಿಧ ಭಜನಾ ಸಂಘಗಳಿಂದ ನಿರಂತರ ಭಜನಾ ಕಾರ್ಯಕ್ರಮ ಜರಗಿತು. ಬೆಳಗ್ಗೆ 24 ತೆಂಗಿನಕಾಯಿ ಮಹಾಗಣಪತಿ ಹೋಮ ನಡೆಯಿತು. ಮಧ್ಯಾಹ್ನ ಶರಣಂ ವಿಳಿ, ಮಹಾಮಂಗಳಾರತಿ, ಅನ್ನಪ್ರಸಾದ, ಸತ್ಸಂಗ, ಅಪರಾಹ್ನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶ್ರೀ ಎಡನೀರು ಮಠ ಇವರ ಆಗಮನ, ಪೂರ್ಣಕುಂಭ ಸ್ವಾಗತ, ಧಾರ್ಮಿಕ ಸಭೆ ಜರಗಿತು. ರಾತ್ರಿ ಶ್ರೀ ಅಯ್ಯಪ್ಪ ದೀಪೋತ್ಸವದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

.jpg)
.jpg)
