ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಸ್‍ಮಸ್ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮವನ್ನು ಶಾಲೆಯ ವಿಭಿನ್ನ ಸಾಮಥ್ರ್ಯದ ವಿದ್ಯಾರ್ಥಿ ಅಯನ್ ಮೊಹಮ್ಮದ್ ಉದ್ಘಾಟಿಸಿದನು.
ಬಿ.ಆರ್.ಸಿ ಸ್ಪೆಶಲ್ ಎಜುಕೇಟರ್ ತನ್ಮಯ್ ಶಾಲಾ ನಿರ್ವಾಹಕ ಸಮಿತಿಯ ಸದಸ್ಯೆ ನಫೀಸತ್ ಮಿಸಿರಿಯ ಶಿಕ್ಷಕಿ ಧನ್ಯ ಉಪ್ಥಿತರಿದ್ದರು. ಶಿಕ್ಷಕಿ ಆಯಿಶತ್ ಸೈನಾಜ್ ಕ್ರಿಸ್‍ಮಸ್ ಆಚರಣೆಯ ಔಚಿತ್ಯ ತಿಳಿಸಿದರು. ಕ್ರಿಸ್‍ಮಸ್ ತಾತನೊಂದಿಗೆ ಶಾಲಾ ವಿದ್ಯಾರ್ಥಿಗಳು ಹಾಡಿ ನಲಿದು ಕುಣಿದು ಕುಪ್ಪಳಿಸಿದರು. ಶಿಕ್ಷಕಿ ಕಾವ್ಯ ಸ್ವಾಗತಿಸಿ, ಶಾರಿ ಟೀಚರ್ ವಂದಿಸಿದರು. ಅಬ್ದುಲ್ ಬಶೀರ್ ಸುಬ್ಬಯ್ಯ ಕಟ್ಟೆ ನಿರ್ವಹಿಸಿದರು.

.jpeg)
.jpeg)
