ಕಾಸರಗೋಡು: ಚಿನ್ಮಯ ಮಿಷನಿನ ನೇತೃತ್ವದಲ್ಲಿ ನಡೆಯುವ ವಸತಿ ರಹಿತರಿಗೊಂದು ವಸತಿ ಯೋಜನೆ ಅಡಿಯಲ್ಲಿ ಒಂಬತ್ತನೇ ಮನೆಯ ಶಿಲಾನ್ಯಾಸವನ್ನು ಚಿನ್ಮಯ ಮಿಷನಿನ ಮುಖ್ಯಸ್ಥರಾದ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ನಡೆಸಿಕೊಟ್ಟರು.
ಈ ಯೋಜನೆಯ ಫಲಾನುಭವಿಗಳಾದ ಚಿನ್ಮಯ ವಿದ್ಯಾಲಯ ಬದಿಯಡ್ಕ ಶಾಲೆಯಲ್ಲಿ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಧರ ನಾಗವೇಣಿ ದಂಪತಿಗಳಾಗಿದ್ದಾರೆ.
ಕಾರ್ಯಕ್ರಮದಲ್ಲಿ ಶಾಲಾ ಮೇಲ್ವಿಚಾರಕ ಪ್ರಶಾಂತ ಬೆಳಿಂಜ ಮತ್ತು ಶಾಲೆಯ ಮುಖ್ಯೋಪಾಧ್ಯಾಯನಿ ಮಾನಸ, ಶಾಲೆಯ ಹಿತೈಷಿಗಳಾದ ಪಿಲಿಂಗಲ್ಲು ಕೃಷ್ಣ ಭಟ್, ಪ್ರಬಂಧಕ ಗಣೇಶ್, ಕಟ್ಟಡ ಅಭಿಯಂತರ ಮೇಲ್ವಿಚಾರಕ ದಿನೇಶ್ ನಾಯಕ್ ಉಪಸ್ಥಿತರಿದ್ದರು.

.jpg)
