ತಿರುವನಂತಪುರಂ: 7ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಕಿರುಕುಳ ನೀಡಿದ ಬಗ್ಗೆ ಮಾಹಿತಿ ಮರೆಮಾಚಿದ್ದಕ್ಕಾಗಿ ಶಾಲೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ತಿಳಿದರೂ ಶಾಲೆಯ ಅಧಿಕಾರಿಗಳು ಕ್ರಮ ಕೈಗೊಳ್ಳಳ್ಲ್ಳದಿರುವುದು ಪ್ರಕರಣ ದಾಖಲಾಗಲು ಕಾರಣವಾಯಿತು. ಮುಖ್ಯೋಪಾಧ್ಯಾಯರು ಹಾಗೂ ಶಾಲೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷಕ ಅರುಣ್ ಮೋಹನ್ ಗೆ ರಿಮಾಂಡ್ ನೀಡಲಾಗಿದೆ.
ತಿರುವನಂತಪುರದ ಪ್ರಮುಖ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಶಿಕ್ಷಕ ಅರುಣ್ ಐದನೇ ತರಗತಿಯಲ್ಲಿ ಓದುತ್ತಿರುವ ಬಾಲಕನನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ. ಕೌನ್ಸೆಲಿಂಗ್ ವೇಳೆ ಮಗು ಕಿರುಕುಳದ ಸಂಗತಿಯನ್ನು ಬಹಿರಂಗಪಡಿಸಿದೆ. ಆದರೆ ಶಾಲೆಯ ಅಧಿಕಾರಿಗಳಿಂದ ಯಾವುದೇ ಮಹತ್ವದ ಪ್ರತಿಕ್ರಿಯೆ ಬಂದಿಲ್ಲ. ದೂರು ದಾಖಲಿಸಲು ಯತ್ನಿಸದೇ ಇತ್ಯರ್ಥಪಡಿಸುವ ಪ್ರಯತ್ನ ನಡೆದಿದೆ.
ನಂತರ ಮಗು ಮನೆಗೆ ಬಂದು ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಆಗ್ರಹಿಸಿದರೂ ಶಾಲೆಯಿಂದ ತಣ್ಣನೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಳಿಕ ಮಗುವಿನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ನಂತರದ ತನಿಖೆಯಲ್ಲಿ ಅರುಣ್ ಮೋಹನ್ ನನ್ನು ಬಂಧಿಸಲಾಯಿತು. ಪೋಕ್ಸೊ ಪ್ರಕರಣ ಸೇರಿದಂತೆ ಗಂಭೀರ ಅಪರಾಧವಾಗಿದ್ದರೂ ಕಾನೂನು ಬದ್ಧವಾಗಿ ವ್ಯವಹರಿಸದ ಮತ್ತು ಮಗುವಿಗೆ ಬೆಂಬಲ ನೀಡದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಶಿಕ್ಷಕನಿಂದ ವಿದ್ಯಾರ್ಥಿಗೆ ಕಿರುಕುಳ- ಮರೆಮಾಚಿದ ಮುಖ್ಯ ಶಿಕ್ಷಕ- ಖಾಸಗಿ ಶಾಲೆಯ ವಿರುದ್ಧ ಪ್ರಕರಣ
0
ಜನವರಿ 26, 2025
Tags

