HEALTH TIPS

Republic Day | ವಿಶೇಷ ಡೂಡಲ್‌ ಮೂಲಕ ಗಣರಾಜ್ಯೋತ್ಸವ ಸಂಭ್ರಮಿಸಿದ ಗೂಗಲ್‌

ನವದೆಹಲಿ: ದೇಶದಾದ್ಯಂತ ಇಂದು (ಭಾನುವಾರ) 76ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಜಾಗತಿಕ ದೈತ್ಯ ಸರ್ಚ್‌ ಎಂಜಿನ್‌ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗಣರಾಜ್ಯೋತ್ಸವವನ್ನು ಸಂಭ್ರಮಿಸಿದೆ.

ಗೂಗಲ್‌ ವಿಶೇಷ ಸಂದರ್ಭಗಳಲ್ಲಿ ತನ್ನ ಡೂಡಲ್ ಅನ್ನು ಬದಲಾಯಿಸುತ್ತದೆ.

ಇಂದು ಕೂಡ ತನ್ನ ಡೂಡಲ್ ಅನ್ನು ಬದಲಾಯಿಸಿದ್ದು, ದೇಶದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಕೆಲವು ಪ್ರಾಣಿಗಳು ಮತ್ತು ಪಕ್ಷಿಗಳನ್ನು ಒಳಗೊಂಡ ಚಿತ್ರವನ್ನು ಹಂಚಿಕೊಂಡಿದೆ.

ಲಡಾಖಿ ಉಡುಗೆಯಲ್ಲಿರುವ ಹಿಮ ಚಿರತೆ, ಸಾಂಪ್ರದಾಯಿಕ ವಾದ್ಯವನ್ನು ಹಿಡಿದಿರುವ, ಧೋತಿ-ಕುರ್ತಾ ಧರಿಸಿರುವ ಹುಲಿ, ನವಿಲು, ಮೊಸಳೆ ಸೇರಿದಂತೆ ಹಲವು ಪ್ರಾಣಿಗಳನ್ನು ಒಳಗೊಂಡ ವರ್ಣರಂಜಿತ ಕಲಾಕೃತಿಯ ಡೂಡಲ್‌ 'ವನ್ಯಜೀವಿ ಮೆರವಣಿಗೆ'ಯ ನೋಟವನ್ನು ನೀಡುತ್ತದೆ.

ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ಆಕರ್ಷಕ ಪಥ ಸಂಚಲನ ನಡೆಯಲಿದೆ. ದೇಶದ ವಿವಿಧ ರಾಜ್ಯಗಳ ಕಲಾತ್ಮಕ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries