ತಿರುವನಂತಪುರಂ: ಕೇರಳಾದ್ಯಂತ ಎಸ್ಸೆಸೆಲ್ಸಿ-ಹೈಯರ್ ಸೆಕೆಂಡರಿ ಶಾಲಾ ಪರೀಕ್ಷೆಗಳು ಮಾ 3ರಂದು ಆರಂಭಗೊಳ್ಳಳಿದ್ದು, 26ರ ವರೆಗೆ ನಡೆಯಲಿದೆ. ರಾಜ್ಯದ 2964ಪರೀಕ್ಷಾ ಕೇಂದ್ರಗಳಲ್ಲಿ 425861ಮಂದಿ ವಿದ್ಯಾರ್ಥಿಗಳು ಎಸ್ಸೆಸೆಲ್ಸಿ ಪರೀಕ್ಷೆಬರೆಯಲಿದ್ದಾರೆ. ಕೊಲ್ಲಿರಾಷ್ಟ್ರದ ಏಳು ಪರೀಕ್ಷಾ ಕೇಂದ್ರಗಳಲ್ಲಿ 682ಮಂದಿ, ಲಕ್ಷದ್ವೀಪದ ಒಂಬತ್ತು ಕೇಂದ್ರಗಳಲ್ಲಿ 447ಮಂದಿ ಪರೀಕ್ಷೆ ಬರೆಯಲಿದ್ದಾರೆ. ಈಗಾಘಲೇ ಹಾಲ್ ಟಿಕೆಟ್ ವಿತರಣೆ ಆರಂಭಗೊಂಡಿದ್ದು, ಫೆ. 1ರಿಂದ 14ರ ವರೆಗೆ ಐ.ಟಿ ಪ್ರಕ್ಟಿಕಲ್ ಪರೀಕ್ಷೆಗಳು ನಡೆದುಬರುತ್ತಿದೆ. ಮೋಡೆಲ್ ಪರೀಕ್ಷೆಗಳು ಫೆ. 17ರಿಂದ 21ರ ವರೆಗೆ ನಡೆಯಲಿದೆ.
ಇದರ ಜತೆಗೆ ಹೈಯರ್ ಸೆಕೆಂಡರಿ ಪ್ರಥಮ ವರ್ಷದ ಪರೀಕ್ಷೆ ಮಾ. 6ರಿಂದ 29ರ ವರೆಗೆ ಜರುಗಲಿದೆ. ಎರಡನೇ ವರ್ಷದ ಪರೀಕ್ಷೆ ಮಾ. 3ರಿಂದ 26ರ ವರೆಗೆ ನಡೆಯಲಿದೆ. ಒಟ್ಟು 1190409ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.



