ಬದಿಯಡ್ಕ: ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಭುಶೇಖರ ಭಾರತೀ ಸ್ವಾಮೀಜಿಗಳವರನ್ನು ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಭೇಟಿ ಮಾಡಿ ಆಮಂತ್ರಣ ಪತ್ರಿಕೆಯನ್ನು ನೀಡಿ ಆಶೀರ್ವಾದ ಪಡೆದರು. ಶ್ರೀಗಳವರು ಕ್ಷೇತ್ರದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಸಾಂಗವಾಗಿ ನೆರವೇರಲೆಂದು ಸ್ವರ್ಣ ಮಂತ್ರಾಕ್ಷತೆ ಒಂದು ಲಕ್ಷ ರೂ. ನೀಡಿ ಹರಸಿದರು.
ಸಮಿತಿಯ ವತಿಯಿಂದ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ, ರಾಮ ಕಾರ್ಮಾರು, ಸುಂದರ ಶೆಟ್ಟಿ ಕೊಲ್ಲಂಗಾನ ಉಪಸ್ಥಿತರಿದ್ದರು.

.jpg)

