ಗುರುವಾಯೂರು: ಗುರುವಾಯೂರಪ್ಪನಿಗೆ ಕಾಣಿಕೆಯಾಗಿ 36 ಪವನ್ ಮೌಲ್ಯದ ಚಿನ್ನದ ಕಿರೀಟ ಅರ್ಪಿಸಲಾಗಿದೆ. ತಮಿಳುನಾಡಿನ ಕಲ್ಲಕುರಿಚಿ ಮೂಲದ ಕುಲೋತ್ತುಂಗನ್ ಅವರು ಕಿರೀಟವನ್ನು ಅರ್ಪಿಸಿರುವರು.
ಮೊನ್ನೆ ಅವರು ಕಿರೀಟ ಸಮರ್ಪಣೆ ಮಾಡಿದರು. ದೇವಸ್ವಂ ಅಧ್ಯಕ್ಷ ಡಾ. ವಿ.ಕೆ. ವಿಜಯನ್ ಕಿರೀಟವನ್ನು ಪಡೆದರು.
ಆಡಳಿತಾಧಿಕಾರಿ ಕೆ.ಪಿ. ವಿನಯನ್, ದೇವಸ್ಥಾನದ ಉಪ ಆಡಳಿತಾಧಿಕಾರಿ ಪ್ರಮೋದ್ ಕಲರಿಕ್ಕಲ್, ಹಾಗೂ ದೇವಸ್ಥಾನದ ಸಹಾಯಕ ವ್ಯವಸ್ಥಾಪಕರಾದ ಕೆ.ರಾಮಕೃಷ್ಣನ್, ಕೆ.ಕೆ. ಸುಭಾಷ್ ಸಿ.ಆರ್. ಲೆಜುಮೋಲ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಕುಲೋತ್ತುಂಗನ್ ಪತ್ನಿ ರೇಣುಕಾದೇವಿ ಮತ್ತು ಹರಕೆ ಅರ್ಪಿಸಿದ ಅವರ ಮಕ್ಕಳು ಆಗಮಿಸಿದ್ದರು.


