ಕಾಸರಗೋಡು: ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರ್ರಕರಣಕಜ್ಕೆ ಸಂಬಂಧಿಸಿ ಮೊಗ್ರಾಲ್‍ಪುತ್ತೂರು ಮಜಲ್ ನಿವಾಸಿ, ಆಟೋಚಾಲಕ ಎಂ. ಮಹಮ್ಮದ್ ಶೆರೀಪ್ ಎಂಬಾತನನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಸಂಜೆ ವಾಹನ ತಪಾಸಣೆ ಮಧ್ಯೆ ಎರಿಯಾಕೋಟ ಭಗವತೀ ಕ್ಷೇತ್ರ ಸನಿಹ ನಗರ ಠಾಣೆ ಎಸ್.ಐ ಎಎಸ್‍ಐ ಅನ್ಸಾರ್ ಹಾಗೂ ಇತರಪೊಲೀಸರ ಮೇಲೆ ಹಲ್ಲೆ ನಡೆಸಿರುದ್ದನು. ಮಹಮ್ಮದ್ ಶೆರೀಪ್ ಚಲಾಯಿಸುತ್ತಿದ್ದ ಆಟೋರಿಕ್ಷಾ ವಶಪಡಿಸಿಕೊಂಡಿದ್ದಾರೆ. ಆಟೋರಿಕ್ಷಾ ನಿಲ್ಲಿಸಿ ಲೈಸನ್ಸ್ ಕೇಳಿದಾಗ ಎಸ್.ಐ ಸಮವಸ್ತ್ರ ಹಿಡಿದೆಳೆದು ನೇಮ್‍ಪ್ಲೇಟ್ ಹಾನಿಯೆಸಗಿರುವುದಲ್ಲದೆ, ಇತರ ಪೊಲೀಸರ ಮೆಲೆ ಹಲ್ಲೆ ನಡೆಸಿರುವ ಬಗ್ಗೆ ಕೇಸು ದಾಖಲಿಸಲಾಗಿದೆ.




