ತ್ರಿಶೂರ್: ನಟ ಶೈನ್ ಟಾಮ್ ಚಾಕೊ ಇಂದು(ಶನಿವಾರ) ಮಧ್ಯಾಹ್ನ 3 ಗಂಟೆಗೆ ಪೋಲೀಸ್ ಠಾಣೆಗೆ ಹಾಜರಾಗಲಿದ್ದಾರೆ ಎಂದು ಅವರ ತಂದೆ ತಿಳಿಸಿದ್ದಾರೆ. "ಇದೆಲ್ಲ ತಮಾಷೆಯಲ್ಲವೇ?" ಎಂದು ಅವರು ಪ್ರತಿಕ್ರಿಯಿಸಿದರು.
ಅವನು ಹೋಟೆಲ್ ನಲ್ಲಿ ಉಳಿದುಕೊಂಡಿದ್ದ, ಬಳಿಕ ಅಲ್ಲಿಂದ ತೆರಳಿದ, ಅಷ್ಟೆ. ಆತನದು ಸಾಮಾನ್ಯ ನಡೆಯಲ್ಲವೇ? ಇನ್ನು ಪ್ರಕರಣವಿದ್ದರೆ, ನಾವು ವಕೀಲರನ್ನು ಸಂಪರ್ಕಿಸಬಹುದು. ಅಪರಾಧ ನಡೆದಾಗ ಮಾತ್ರ ಪ್ರಕರಣ ಉದ್ಭವಿಸುತ್ತದೆ. "ಆದರೆ ಪ್ರಕರಣ ಎಲ್ಲೂ ದಾಖಲಾಗಿಲ್ಲ. ಇದ್ದರೆ ಈಗಲೇ ಹೇಳಲು ಸಾಧ್ಯವಿಲ್ಲ" ಎಂದು ನಟನ ತಂದೆ ಚಾಕೊ ಹೇಳಿದರು.
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಶೈನ್ ಟಾಮ್ ಚಾಕೊ ಅವರ ಮನೆಗೆ ಆಗಮಿಸಿದ್ದ ಪೋಲೀಸರು, ಎರ್ನಾಕುಳಂ ಟೌನ್ ನಾರ್ತ್ ಠಾಣೆಯಲ್ಲಿ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಇಂದು ಮಧ್ಯಾಹ್ನ 3 ಗಂಟೆಗೆ ತನ್ನ ಪುತ್ರ ಠಾಣೆಗೆ ಹಾಜರಾಗುವುದಾಗಿ ನೋಟಿಸ್ ಸ್ವೀಕರಿಸಿದ ನಂತರ ಶೈನ್ ತಂದೆ ಉತ್ತರಿಸಿದ್ದಾರೆ ಎಂದು ಪೋಲೀಸರು ನಂತರ ಪ್ರತಿಕ್ರಿಯಿಸಿದರು.
ವಿಶೇಷ ತಪಾಸಣಾ ತಂಡವನ್ನು ಕಂಡ ತಕ್ಷಣ ಸಿನಿಮೀಯ ರೀತಿಯಲ್ಲಿ ತಾನುಳಿದುಕೊಂಡಿದ್ದ ಹೋಟೆಲ್ ಕೊಠಡಿಯಿಂದ ಸಾಹಸಿಕವಾಗಿ ಪರಾರಿಯಾಗಿರುವುದರ ಹಿಂದಿನ ವಿಷಯವೇನೆಂದು ಠಾಣೆಗೆ ಹಾಜರಾಗುವ ವೇಳೆ ಪೋಲೀಸರು ಕೇಳಲಿದ್ದಾರೆ.





