ಪತ್ತನಂತಿಟ್ಟ: ಕೊನ್ನಿ ಆನೆ ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಲು ಬಂದಿದ್ದ ಕುಟುಂಬವೊಂದರ 4 ವರ್ಷದ ಬಾಲಕನ ದೇಹದ ಮೇಲೆ ಕಾಂಕ್ರೀಟ್ ಕಂಬ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ಬಾಲಕನನ್ನು ಅಡೂರ್ ಕಡಂಬನಾಡ್ ಮೂಲದ ಅಭಿರಾಮ್ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಆನೆ ಆವರಣಕ್ಕೆ ಭೇಟಿ ನೀಡುತ್ತಿದ್ದಾಗ, ಮಗು ಕಾಂಕ್ರೀಟ್ ಕಂಬದ ಬಳಿ ನಿಂತು ತಾಯಿಯಿಂದ ಪೋಟೋ ತೆಗೆಸಲು ಕಂಬಕ್ಕೊರಗಿದಾಗ ಈ ಘಟನೆ ನಡೆದಿದೆ. ನಾಲ್ಕು ಅಡಿ ಎತ್ತರದ ಕಾಂಕ್ರೀಟ್ ಕಂಬವೊಂದು ಅವನ ದೇಹದ ಮೇಲೆ ಬಿದ್ದಿತು.
ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ. ಘಟನೆಯ ಬಗ್ಗೆ ಪೋಲೀಸರು ಮತ್ತು ಅರಣ್ಯ ಇಲಾಖೆ ತನಿಖೆ ನಡೆಸಲಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮಗುವನ್ನು ಪತ್ತನಂತಿಟ್ಟ ಜನರಲ್ ಆಸ್ಪತ್ರೆಗೆ ಕರೆದೊಯ್ದರು. ಪೋಷಕರ ಮುಂದೆಯೇ ಅಪಘಾತ ಸಂಭವಿಸಿದೆ.
ಘಟನೆಯ ನಂತರ ಕೊನ್ನಿ ಆನೆ ಅಭಯಾರಣ್ಯವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಹಳತಾದ ಕಂಬ ದುರ್ಬಲಗೊಂಡಿದೆಯೇ ಎಂದು ಪರಿಶೀಲಿಸುವುದು ಅವಶ್ಯಕ. ಹಿಂದೆ ಗಡಿಗಳಾಗಿ ಬಳಸಲಾಗುತ್ತಿದ್ದ ಕಂಬಗಳನ್ನು ಸುಂದರಗೊಳಿಸಲಾಯಿತು ಮತ್ತು ಪಾದಚಾರಿ ಮಾರ್ಗದ ಬದಿಯಲ್ಲಿ ಇರಿಸಲಾಗಿತ್ತು.
ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ:
ನಾಲ್ಕು ವರ್ಷದ ಬಾಲಕ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆಯಲ್ಲಿ ಕೊನ್ನಿ ಆನೆ ಆಶ್ರಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಎ ಕೆ ಶಶೀಂದ್ರನ್ ಹೇಳಿದ್ದಾರೆ.
ಮೃತ ಬಾಲಕ ಅಭಿರಾಮ್, ಅಡೂರ್ ಕಡಂಬನಾಡ್ ಮೂಲದವರಾಗಿದ್ದು, ಶುಕ್ರವಾರ ಬೆಳಿಗ್ಗೆ ಆನೆಗಳನ್ನು ನೋಡಲು ತಮ್ಮ ಕುಟುಂಬದೊಂದಿಗೆ ಬಂದಿದ್ದ. ಅಭಿರಾಮ್ ನನ್ನು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ,ಜೀವ ಉಳಿಸಲಾಗಲಿಲ್ಲ.
ಅಪಾಯದ ಅರಿವಿಲ್ಲದೆ ಅಧಿಕಾರಿಗಳು ಸಾಕಷ್ಟು ಗಮನ ಹರಿಸಲು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಅರಣ್ಯ ಸಚಿವರು ಹೇಳಿದರು. ದಕ್ಷಿಣ ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ತುರ್ತು ವರದಿಯನ್ನು ಕೋರಲಾಗಿದೆ.






