ಕಣ್ಣೂರು: ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಂದ ಮೊಬೈಲ್ ಪೋನ್‍ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಣ್ಣೂರು ನಗರ ಪೋಲೀಸರು ಕೈದಿಗಳಾದ ರಂಜಿತ್, ಅಖಿಲ್ ಮತ್ತು ಇಬ್ರಾಹಿಂ ಬಾದುಷಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇವರು ಹಲ್ಲೆ ಪ್ರಕರಣಗಳ ಆರೋಪಿಗಳು. ಒಂದು ಮೊಬೈಲ್ ಪೋನ್, ಏರ್‍ಪಾಡ್, ಯುಎಸ್‍ಬಿ ಕೇಬಲ್, ಸಿಮ್ ಇತ್ಯಾದಿಗಳು ಪತ್ತೆಯಾಗಿವೆ. ಜೈಲು ಅಧೀಕ್ಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಜೈಲು ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದಾಗ ಜೈಲಿನೊಳಗೆ ಮೊಬೈಲ್ ಪೋನ್‍ಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳು ಪತ್ತೆಯಾಗಿವೆ.


