ಕಾಸರಗೋಡು: ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಕಾಲಿಕಡವು ಮೈದಾನದಲ್ಲಿ ನಡೆಯುತ್ತಿರುವ ನನ್ನ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದೊಂದಿಗೆ ಮೊಬೈಲ್ ಎಲ್‍ಇಡಿ ವಾಹನವು ತನ್ನ ಪ್ರಯಾಣವನ್ನು ಪ್ರಾರಂಭಿಸಿತು.
ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ನಡೆಸಲಾಗಿರುವ ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳ ದೃಶ್ಯಗಳು, ವೀಡಿಯೊಗಳು ಮತ್ತು ಕಿರುಚಿತ್ರಗಳನ್ನು ಒಳಗೊಂಡ ಎಲ್‍ಇಡಿ ವಾಹನದೊಂದಿಗೆ ಜಿಲ್ಲಾದ್ಯಂತ ಪ್ರಯಾಣ ನಡೆಸಲಿದೆ. ಜಿಲ್ಲೆಯ ಪ್ರಮುಖ ರಸ್ತೆಗಳು ಮತ್ತು ಪಟ್ಟಣಗಳಲ್ಲಿ ವಾಹನಗಳನ್ನು ನಿಲ್ಲಿಸಿ ಮತ್ತು ಸಾರ್ವಜನಿಕರಿಗೆ ದೃಶ್ಯಗಳನ್ನು ವೀಕ್ಷಿಸಲು ಅವಕಾಶವನ್ನು ಒದಗಿಸಿಕೊಡಲಾಗುವುದು. ಮೊಬೈಲ್-ಎಲ್‍ಇಡಿ ವಾಹನವನ್ನು ಪಿಆರ್‍ಡಿ ನಿರ್ದೇಶಕ ಟಿ.ವಿ. ಸುಭಾಷ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಹೆಚ್ಚುವರಿ ನಿರ್ದೇಶಕರುಗಳಾದ ವಿ.ಪಿ. ಪ್ರಮೋದ್ ಕುಮಾರ್, ಕೆ.ಜಿ. ಸಂತೋಷ್, ಉಪ ನಿರ್ದೇಶಕರುಗಳಾದ ಎಂ. ನಫಿಹ್, ಕೆ.ಟಿ. ಶೇಖರ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಉಪಸ್ಥಿತರಿದ್ದರು.


