HEALTH TIPS

ನನ್ನ ಕೇರಳ ಪ್ರದರ್ಶನ, ಮಾರಾಟ ಮೇಳದಲ್ಲಿ ಜನದಟ್ಟಣೆ

ಕಾಸರಗೋಡು: ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಕಾಸರಗೋಡಿನ ಕಾಲಿಕಡವು ಮೈದಾನದಲ್ಲಿ  ನನ್ನ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳಕ್ಕೆ ಜನದಟ್ಟಣೆಯೊಂದಿಗೆ ಮುಂದುವರಿಯುತ್ತಿದೆ.   ವಿವಿಧ ಇಲಾಖೆಗಳ ಮಳಿಗೆಗಳು, ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ, ಸಂಜೆ 5 ರಿಂದ ರಾತ್ರಿ 10 ರವರೆಗೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳು ಮೇಳಕ್ಕೆ ಕಳೆಯೇರಿಸುತ್ತಿದೆ. ರಾಜ್ಯ ಸರ್ಕಾರದ ಒಂಬತ್ತು ವರ್ಷಗಳ ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಹಳ ಜತೆಗೆ ವಿವಿಧ ಮಳಿಗೆಗಳು ಮತ್ತು ಪ್ರದರ್ಶನ ಕಾರ್ಯಕ್ರಮಗಳಿಗೆ ಜನ ಮುಗಿಬೀಳುತ್ತಿದ್ದಾರೆ. 

ಮಕ್ಕಳಿಂದ ತೊಡಗಿ ಹಿರಿಯ ನಾಗರಿಕರ ವರೆಗೂ ಮೇಳದಲ್ಲಿ ನಾನಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.  ಸಾರ್ವಜನಿಕ ಸಂಪರ್ಕ ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಸೇರಿದಮತೆ 200ಕ್ಕೂ ಹೆಚ್ಚು  ಮಳಿಗೆಗಳು ಕಾರ್ಯಾಚರಿಸುತ್ತಿದೆ. ವಿವಿಧ ಇಲಾಖೆಗಳು ಮಳಿಗೆಗಳಲ್ಲಿ ನೇರ ಸೇವೆಗಳನ್ನು ಒದಗಿಸಿದರೆ, ಇತರ ಇಲಾಖೆಗಳು ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಟವನ್ನು ಆಯೋಜಿಸಿದೆ. ಸಾಮಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬ್ಯಾಂಡ್ ಮೇಳ, ನಂತರ ಕಲ್ಲರ ಗೋಪನ್ ಅವರಿಂದ ಮಧುರ ಗೀತೆಗಳು, ಕಲಾಮಂಡಲಂ ಸ್ವರಚಂದ್ ಮತ್ತು ತಂಡದಿಂದ ದುರ್ಯೋಧನ ವಧೆ ಕಥಕ್ಕಳಿ, ಯುವ ಕಲ್ಯಾಣ ಮಂಡಳಿಯಿಂದ ಮಾರ್ಗಂ ಕಲಿ, ಸಮೂಹ ನೃತ್ಯ, ಯಕ್ಷನಾಟ್ಯ ಮತ್ತು ಅಂಗನವಾಡಿ ಮಕ್ಕಳಿಂದ ನೃತ್ಯ ಪ್ರದರ್ಶನ ಆಯೋಜಿಸಲಾಗಿತ್ತು. ಒಪ್ಪನ, ಸುಭಾಷ್ ಆರುಕರ ಮತ್ತು ಸುರೇಶ್ ಪಳ್ಳಿಪ್ಪರ ಸಿದ್ಧಪಡಿಸಿದ ಜಾನಪದ ಗೀತೆ, ಕಣ್ಣೂರು ಯುವ ಕಲಾಸಾಹಿತ್ಯ ತಂಡದಿಂದ ನಾಟಕ ಪ್ರದರ್ಶನವೂ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries