ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿ ಮತ್ತು ಅಧಿಕೃತ ನಿವಾಸ ಕ್ಲಿಫ್ ಹೌಸ್‍ಗೆ ಬಾಂಬ್ ಬೆದರಿಕೆ ಬಂದಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಕಚೇರಿಯನ್ನು ಉಡಾಯಿಸಲಾಗುವುದಾಗಿ ಸಂದೇಶದಲ್ಲಿ ಹೇಳಲಾಗಿದೆ. ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯ ಇಮೇಲ್‍ನಲ್ಲಿ ಸಂದೇಶ ಬಂದಿದೆ.
ಇದೇ ರೀತಿಯ ಸಂದೇಶವು ಸಾರಿಗೆ ಆಯುಕ್ತರ ಕಚೇರಿ ಮತ್ತು ನೆಡುಂಬಸ್ಸೆರಿ ವಿಮಾನ ನಿಲ್ದಾಣಕ್ಕೂ ತಲುಪಿತು. ರಾಜಭವನಕ್ಕೂ ಬೆದರಿಕೆ ಸಂದೇಶ ಬಂದಿದೆ. ತರುವಾಯ, ಬಾಂಬ್ ನಿಷ್ಕ್ರಿಯ ದಳವು ಸಚಿವಾಲಯ, ಕ್ಲಿಫ್ ಹೌಸ್ ಮತ್ತು ರಾಜಭವನವನ್ನು ಪರಿಶೀಲಿಸಲು ಪ್ರಾರಂಭಿಸಿತು.
ಕಳೆದ ಎರಡು ವಾರಗಳಲ್ಲಿ ತಿರುವನಂತಪುರಂ ನಗರದಲ್ಲಿ 16 ನಕಲಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಆದರೆ ಪೆÇಲೀಸರಿಗೆ ಸಂದೇಶದ ಮೂಲ ಇನ್ನೂ ಪತ್ತೆಯಾಗಿಲ್ಲ. ನಿನ್ನೆ ಪಂಚತಾರಾ ಹೋಟೆಲ್‍ಗೆ ಸಂದೇಶ ಬಂದಿತ್ತು..


