ಕೀವ್: ಕುರ್ಸ್ಕ್ ಪ್ರದೇಶದಿಂದ ಉಕ್ರೇನ್ ಸೇನೆಯನ್ನು ಹಿಮ್ಮೆಟ್ಟಿಸಿದ್ದು ಗಡಿ ಭಾಗದ ತನ್ನ ಗ್ರಾಮ ಒಲೆಶ್‌ನ್ಯಾದ ಮೇಲೆ ಸೇನೆ ನಿಯಂತ್ರಣ ಸಾಧಿಸಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.
ಈ ಕುರಿತು ಉಕ್ರೇನ್ ಪ್ರತಿಕ್ರಿಯಿಸಿಲ್ಲ. 'ಉಕ್ರೇನ್‌ನ ವಿವಿಧ ಪ್ರದೇಶಗಳನ್ನ ಗುರಿಯಾಗಿಸಿ ರಷ್ಯಾ ಪಡೆಗಳು 87 ಡ್ರೋನ್‌ಗಳಿಂದ ದಾಳಿ ಮಾಡಿವೆ.
ಈ ಪೈಕಿ 33 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ' ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.




