ಕಾಸರಗೋಡು: ಸ್ವಾಮಿ ಚಿನ್ಮಯಾನಂದ ಜೀ ಅವರ 109ನೇ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಮೇ 8ರಂದು ಆಚರಿಸಲಾಗುವುದು. ಚಿನ್ಮಯ ಜಯಂತಿಯ ಅಂಗವಾಗಿ, ಕನ್ಯಪ್ಪಾಡಿ ಆಶ್ರಯ ವೃದ್ಧಾಶ್ರಮದ ನಿವಾಸಿಗಳಿಗೆ ಹುಟ್ಟುಹಬ್ಬದ ಭೋಜನ ಒದಗಿಸಲಾಗುವುದು. 8 ರಂದು ಬೆಳಿಗ್ಗೆ 9.15ರಿಂದ ಚಿನ್ಮಯ ವಿದ್ಯಾಲಯ ಭಜನಾ ತಂಡ ಹಾಗೂ ಶ್ರೀದೇವಿ ಸಮೂಹದಿಂದ ಶ್ರೀದೇವಿ ಸ್ತೋತ್ರ ಮತ್ತು ಭಜನೆ ನಡೆಯುವುದು. 10ರಿಂದ 10-30ರವರೆಗೆ ಬ್ರಹ್ಮಚಾರಿಣಿ ದಿಶಾ ಚೈತನ್ಯ ಅವರ ನೇತೃತ್ವದಲ್ಲಿ ಪಾದುಕಾ ಪೂಜೆ ನಡೆಯಲಿದೆ. 10.30ಕ್ಕೆ ಸಂಸ್ಮರಣಾ ಸಭೆ ನಡೆಯಲಿದೆ. ಚಿನ್ಮಯ ಮಿಷನ್ ಅಧ್ಯಕ್ಷ ಎ.ಕೆ. ನಾಯರ್ ಅಧ್ಯಕ್ಷತೆ ವಹಿಸುವರು. ತ್ರಿಶೂರ್ ಕಲ್ಲತ್ತೂರು ಚಿನ್ಮಯ ವಿದ್ಯಾಲಯದ ಮಾಜಿ ಕಾರ್ಯದರ್ಶಿ ಮತ್ತು ಖ್ಯಾತ ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞೆ ಶ್ರೀಮತಿ ಪದ್ಮಜಾ ವೇಣುಗೋಪಾಲ್ ಅವರು ಮುಖ್ಯ ಭಾಷಣ ಮಾಡುವರು. ಸ್ವಾಮಿ ವಿವೇಕಾನಂದ ಸರಸ್ವತಿ ಅವರು ಆಶೀರ್ವಚನ ನೀಡುವರು. ಈ ಸಂದರ್ಭ ಭಗವದ್ಗೀತೆಯ 15 ನೇ ಅಧ್ಯಾಯದ 10 ಶ್ಲೋಕಗಳ ಕುರಿತು ಚಿನ್ಮಯ ಕುಟುಂಬ ಸದಸ್ಯರಿಂದ ಕಿರು ಭಾಷಣ, ನಂತರ ಸ್ವಾಮಿ ಚಿನ್ಮಯಾನಂದಜಿ ಅವರ ಗೀತಾ ಪ್ರವಚನದ ವೀಡಿಯೊ ಪ್ರದರ್ಶನ ನಡೆಯುವುದು.

