ಕಾಸರಗೋಡು: ಪ್ರೆಸ್‍ಕ್ಲಬ್ ಕಾಸರಗೋಡು ವತಿಯಿಂದ ಪತ್ರಕರ್ತರಿಗಾಗಿ ಆಯೋಜಿಸಲಾಗುತ್ತಿರುವ ರಾಜ್ಯಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯ ಲಾಂಛನ ಬಿಡುಗಡೆ ಸಮಾರಂಭ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಜರುಗಿತು.
ಮಾದಕ ವಸ್ತು ವಿರೋಧಿ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಕಿಕ್ ಡ್ರಗ್ಸ್ ಕಾರ್ಯಕ್ರಮದ ವೇದಿಕೆಯಲ್ಲಿ ರಆಜ್ಯ ಕ್ರೀಡಾ ಸಚಿವ ವಿ. ಅಬ್ದುಲ್ ರಹಮಾನ್ ಲಾಂಛನ ಅನಾವರಣಗೊಳಿಸಿದರು. ಶಾಸಕ ಎಂ. ರಾಜಗೋಪಾಲನ್, ಜಿಪಂ ಅದ್ಯಕ್ಷೆ ಬೇಬಿ ಬಾಲಕೃಷ್ಣನ್, ರಾಜ್ಯ ಕ್ರೀಡಾ ಮಂಡಳಿ ಅಧ್ಯಕ್ಷ ಯು.ಶರಫಲಿ, ಜಿಲ್ಲ ಸ್ಪೋಟ್ರ್ಸ್ ಕೌನ್ಸಿಲ್ ಅದ್ಯಕ್ಷ ಹಬೀಬ್ ರಹಮಾನ್, ವಿ.ವಿ ರಮೇಶನ್, ಪ್ರೆಸ್‍ಕ್ಲಬ್ ಅಧ್ಯಕ್ಷ ಶಿಜು ಕಣ್ಣನ್, ಕಾರ್ಯದರ್ಶೀ ಪ್ರದೀಪ್‍ನಾರಾಯಣ್, ಉಪಾಧ್ಯಕ್ಷ ಅಬ್ದುಲ್ಲಕುಞÂ ಉದುಮ, ಕೆ.ವಿಪದ್ಮೇಶ್, ಸತೀಶನ್ ಕರಿಚ್ಚೇರಿ ಮೊದಲಾದವರು ಉಪಸ್ಥಿತರಿದ್ದರು.


