ಕಾಸರಗೋಡು: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನೆರೆರಾಷ್ಟ್ರ ಪಾಕಿಸ್ತಾನದೊಂದಿಗೆ ಯುದ್ಧ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ಕೇರಳದ ಎಲ್ಲ 14ಜಿಲ್ಲೆಗಳಲ್ಲಿ ಮೇ 7ರಂದು ಕಲ್ಪಿತ ಕಾರ್ಯಚರಣೆ ನಡೆಯಲಿದೆ. ಜಿಲ್ಲ ಕೇಂದ್ರದ ಆಯ್ದ ಪ್ರದೇಶಗಳಲ್ಲಿ ಮೋಕ್‍ಡ್ರಿಲ್ ನಡೆಯಲಿದೆ. ಸಂಜೆ 4ಕ್ಕೆ ಸಿವಿಲ್ ಡಿಫೆನ್ಸ್ ವಿಭಾಗ ಮೋಕ್‍ಡ್ರಿಲ್ ಆಯೋಜಿಸಲಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸಂದೇಶ ರವಾನಿಸಿದೆ. ವಾಯುದಾಳಿ ನಡೆದಲ್ಲಿ ಯಾವ ರೀತಿ ಪೂರ್ವತಯಾರಿ ನಡೆಸಬೇಕು ಎಂಬ ಬಗ್ಗೆ ಜನತೆಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮೋಕ್‍ಡ್ರಿಲ್ ಆಯೋಜಿಸಲಾಗುತ್ತಿರುವುದಾಘಿ ರಾಜ್ಯ ಅಗ್ನಿಶಾಮಕ ದಳ ನಿರ್ದೇಶಕ ಮನೋಜ್ ಅಬ್ರಹಾಂ ತಿಳಿಸಿದ್ದಾರೆ.


