ತಿರುವನಂತಪುರ: ವೆಂಜರಮೂಡು ಹತ್ಯಾಕಾಂಡ ಪ್ರಕರಣದ ಆರೋಪಿ ಅಫಾನ್ ಜೈಲಿನ ಶೌಚಾಲಯದಲ್ಲಿ ನೇಣು ಹಾಕಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಅಫ್ಫಾನ್ ನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಣಗಲು ನೇತುಹಾಕಿದ್ದ ಮುಂಡು ಬಳಸಿ ಆತ್ಮಹತ್ಯೆಗೆ ಯತ್ನಿಸಿರುವುದು ಕಂಡುಬಂದಿದೆ. ಅಫಾನ್ ಪ್ರಸ್ತುತ ತಿರುವನಂತಪುರಂ ವೈದ್ಯಕೀಯ ಕಾಲೇಜಿನ ತೀವ್ರ ನಿಗಾ ಘಟಕದಲ್ಲಿದ್ದಾನೆ.
ರಾಜ್ಯವನ್ನೇ ಬೆಚ್ಚಿಬೀಳಿಸಿದ ವೆಂಜಾರಮೂಡು ಹತ್ಯಾಕಾಂಡದಲ್ಲಿ ಪೋಲೀಸರು ಮೊದಲ ಆರೋಪಪಟ್ಟಿ ಮೊನ್ನೆ ಸಲ್ಲಿಸಿದ್ದರು. ಆರೋಪಿ ಅಫಾನ್ ನ ಚಿಕ್ಕಮ್ಮ ಸಲ್ಮಾ ಬೀವಿ ಕೊಲೆ ಪ್ರಕರಣದಲ್ಲಿ ಹೇಳಿಕೆ ಪಡೆದು ಪಾಂಗೋಡ್ ಪೋಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.
450 ಪುಟಗಳ ಆರೋಪ ಪಟ್ಟಿಯನ್ನು ನೆಡುಮಂಗಾಡ್ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 2 ರಲ್ಲಿ ಸಲ್ಲಿಸಲಾಗಿದೆ. ಆರೋಪ ಪಟ್ಟಿಯಲ್ಲಿ ಅಫಾನ್ ನ ಐಷಾರಾಮಿ ಜೀವನಶೈಲಿ ಮತ್ತು ಆರ್ಥಿಕ ಹೊರೆಗಳು ಕೊಲೆಗೆ ಕಾರಣವೆಂದು ಹೇಳಲಾಗಿದೆ. ವೆಂಜರಮೂಡು ಹತ್ಯಾಕಾಂಡದ 88 ದಿನಗಳ ನಂತರ ಪೋಲೀಸರು ಮೊದಲ ಆರೋಪಪಟ್ಟಿ ಸಲ್ಲಿಸಿದರು.


