ಪೆರ್ಲ: ಪವಿತ್ರ ಹಜ್ ಯಾತ್ರೆಗೆ ತೆರಳಿದ್ದ ನಿವೃತ್ತ ಅಧ್ಯಾಪಕ, ಎಣ್ಮಕಜೆ ಪಂಚಾಯಿತಿ ಮುಂಡಿತ್ತಡ್ಕ ಸನಿಹದ ಪಳ್ಳಂ ವಳಮೊಗರು ನಿವಾಸಿ ಬಾಪುಞÂ(72)ಮಕ್ಕಾದಲ್ಲಿ ಹೃದಯಗತದಿಂದ ಮೃತಪಟ್ಟಿದ್ದಾರೆ. ಮೃತರ ಅಂತ್ಯಸಂಸ್ಕಾರ ಮದೀನಾದಲ್ಲಿ ನೆರವೇರಿಸಲಾಗಿದೆ. ಮೇ 6ರಂದು ಪತ್ನಿ ಹಾಗೂ ಸಹೋದರಿಯೊಂದಿಗೆ ಹಜ್ ಯಾತ್ರೆ ಕೈಗೊಂಡಿದ್ದರು. ಎದೆನೋವು ಕಾಣಿಸಿಕೊಂಡಿದ್ದ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕಾಸರಗೋಡು ನೆಲ್ಲಿಕುಂಜೆ ಬಾಲಕಿಯರ ಸರ್ಕಾರಿ ಹೈಯರ್ ಸಎಕೆಂಡರಿ ಶಾಲೆ ನಿವೃತ್ತ ಪ್ರಾಂಶುಪಾಲರಾಗಿದ್ದರು.




