ಕಾಸರಗೋಡು: ಮಧೂರಿನಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ಕಳನಾಡ್ ಮೂಲದ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಸಾದಿಕ್ ಕಳನಾಡ್ ಎಂಬವರು ನಾಪತ್ತೆಯಾದ ವ್ಯಕ್ತಿ.
ಶುಕ್ರವಾರ ಬೆಳಿಗ್ಗೆ ಸಾದಿಕ್ ತನ್ನ ಸೋದರ ಮಾವ ಮೊಯ್ದೀನ್ ಜೊತೆ ನಡೆದು ಸಾಗುತ್ತಿದ್ದಾಗ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಮೊಯ್ದೀನ್ ಅವರು ನೀರಿಗೆ ಬಿದ್ದಿದ್ದರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಾಹಿತಿ ಪಡೆದ ನಂತರ ಸ್ಥಳಕ್ಕೆ ತಲುಪಿದ ಅಗ್ನಿಶಾಮಕ ದಳವು ಸಾದಿಕ್ ಗಾಗಿ ಹುಡುಕಾಟ ಮುಂದುವರಿಸಿದೆ. ಗುರುವಾರ ರಾತ್ರಿಯಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಹಲವೆಡೆ ಅಪಘಾತಗಳು ವರದಿಯಾಗಿವೆ.

