ಕಾಸರಗೋಡು: ವಿದೇಶಕ್ಕೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ಯುವಕ ನಾಪತ್ತೆಯಾಗಿರುವ ಬಗ್ಗೆ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರೆ. ಮುಳಿಯಾರು ಪಂಚಾಯಿತಿ, ಮಲ್ಲ ಪುಂಜಂಗೋಡು ನಿವಾಸಿ ಚಂದ್ರನ್ ಎಂಬವರ ಪುತ್ರ ಕೆ. ರಾಗೇಶ್(35)ನಾಪತ್ತೆಯಾದವರು. ಗಲ್ಫ್‍ಗೆ ತೆರಳುವುದಾಗಿ ಮೇ 5ರಂದು ಮನೆಯಿಂದ ಹೊರಟಿದ್ದ ಇವರು, ಗಲ್ಫಿಗೂ ತೆರಳದೆ, ಮನೆಗೂ ವಾಪಸಾಗದೆ ನಾಪತ್ತೆಯಾಗಿರುವುದಾಗಿ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.





