ಮಂಜೇಶ್ವರ: ಆನೆಕಲ್ಲು ಛತ್ರದ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯಕ್ಷಗಾನ ತರಬೇತಿಯನ್ನು ದೀಪ ಬೆಳಗಿಸುವ ಮೂಲಕ ಕ್ಷೇತ್ರ ಪವಿತ್ರಪಾಣಿ ನಾಣಿತ್ತಿಲು ಮಹಾಲಿಂಗೇಶ್ವರ ಭಟ್ ಪಾರೆಕುಂಡಡ್ಕ ಉದ್ಘಾಟಿಸಿದರು.
ಯಕ್ಷಗಾನ ಗುರುಗಳಾದ ಜಗದೀಶ್ ಅಂಗ್ರಿ ತರಗತಿಯ ಬಗ್ಗೆ ವಿವರಿಸಿದರು. ಸೇವಾಸಮಿತಿಯ ಅಧ್ಯಕ್ಷ ಯನ್. ಟಿ. ರೈ ಸೇನ್ಯ ಕಲ್ಲಾಡಿಗುತ್ತು ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀಕ್ಷೇತ್ರದ ಆಡಳಿತ ಟ್ರಸ್ಟಿ ಕೃಷ್ಣ ನಾಯ್ಕ್ ಸೊಡಂಕೂರು, ಭಜನಾ ಗುರುಗಳಾದ ರoಜನ್ ವಗೆನಾಡು, ಗ್ರಾ.ಪಂ. ಸದಸ್ಯೆ ಸೀತ, ಹಿರಿಯರಾದ ಮಹಾಲಿಂಗ ಭಟ್ ಪಜ್ವ,
ಮಾತೃ ಮಂಡಳಿಯ ಅಧ್ಯಕ್ಷೆ ಮಮತ ಮುಗುಳಿ ಉಪಸ್ಥಿತರಿದ್ದರು. ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ನಾಣಿಲ್ತಡಿ ಸ್ವಾಗತಿಸಿ, ವಂದಿಸಿದರು.




.jpg)
