ಕೋಝಿಕ್ಕೋಡ್: ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗದ ಹತ್ತಿರ ಹಠಾತ್ ಹೊಗೆ ಹರಡುತ್ತಿದ್ದಂತೆ ರೋಗಿಗಳನ್ನು ಸ್ಥಳಾಂತರಿಸಲಾಯಿತು. ಹೊಗೆಯಿಂದಾಗಿ ರೋಗಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಉಸಿರಾಡಲು ತೊಂದರೆ ಅನುಭವಿಸಿದರು.
ಶಾರ್ಟ್ ಸಕ್ರ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿದೆ ಎಂಬುದು ಪ್ರಾಥಮಿಕ ತೀರ್ಮಾನ. ಯುಪಿಎಸ್ ಕೊಠಡಿಯಿಂದ ಹೊಗೆ ಹರಡಿತು. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು.
ಮೂರು ಮಹಡಿಗಳಿಂದ ರೋಗಿಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಯಿತು. ತುರ್ತು ಚಿಕಿತ್ಸಾ ವಿಭಾಗದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಮತ್ತು ಇತರರನ್ನು ಕೆಳ ಮಹಡಿಗಳಿಗೆ ವರ್ಗಾಯಿಸಲಾಯಿತು. ರೋಗಿಗಳನ್ನು ಸ್ಥಳಾಂತರಿಸಲು ಆ ಪ್ರದೇಶದಲ್ಲಿ ಹಲವಾರು ಆಂಬ್ಯುಲೆನ್ಸ್‍ಗಳನ್ನು ಬಳಸಲಾಯಿತು.
ಪೋಲೀಸರು, ಅಗ್ನಿಶಾಮಕ ದಳ, ಸ್ವಯಂಸೇವಾ ಸಂಸ್ಥೆಗಳು, ಆಸ್ಪತ್ರೆ ಸಿಬ್ಬಂದಿ ಮತ್ತು ಸ್ಥಳೀಯರು ರೋಗಿಗಳನ್ನು ಸ್ಥಳಾಂತರಿಸಿದರು. ದಟ್ಟವಾದ ಹೊಗೆಯಿಂದಾಗಿ ರೋಗಿಗಳು ಮತ್ತು ಅವರ ಜೊತೆಗಿರುವವರು ತೊಂದರೆ ಅನುಭವಿಸುತ್ತಿದ್ದಾರೆ.





