HEALTH TIPS

Operation Sindoor ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ,ಬದಲಾದ ಭಾರತದ ಪ್ರತಿಬಿಂಬ:PM

ನವದೆಹಲಿ: 'ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮದ 122ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳು ನಡೆಸಿರುವ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಸ್ತಾಪಿಸಿದ್ದಾರೆ.

ಆಪರೇಷನ್ ಸಿಂಧೂರ' ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಬದಲಾದ ಭಾರತದ ಪ್ರತಿಬಿಂಬ' ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

'ಇಂದು ಇಡೀ ದೇಶವೇ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಜಾಗತಿಕ ವೇದಿಕೆಯಲ್ಲಿ ಭಾರತದ ದೃಢಸಂಕಲ್ಪ, ಧೈರ್ಯ ಮತ್ತು ಬೆಳೆಯುತ್ತಿರುವ ಶಕ್ತಿಯು ಪ್ರತಿಫಲಿಸುತ್ತದೆ' ಎಂದು ಹೇಳಿದ್ದಾರೆ.

'ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಆಪರೇಷನ್ ಸಿಂಧೂರ ಒಂದು ಮಹತ್ವದ ತಿರುವು ಆಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೊಸ ಚೈತನ್ಯವನ್ನು ತುಂಬಿದೆ. ಭಾರತದ ಶಕ್ತಿ ಹಾಗೂ ಉದ್ದೇಶದ ಸ್ಪಷ್ಟತೆಯ ಸಂಕೇತವಾಗಿದೆ' ಎಂದು ಹೇಳಿದ್ದಾರೆ.

ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ನೆಲೆಗಳನ್ನು ನಾಶಗೊಳಿಸಿರುವ ಭಾರತೀಯ ಸಶಸ್ತ್ರ ಪಡೆಗಳನ್ನು ಪ್ರಧಾನಿ ಮೋದಿ ಹೊಗಳಿದ್ದಾರೆ.

ದೇಶದೆಲ್ಲೆಡೆಯಿಂದ ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿ ಸಂದೇಶದ ಮಹಾಪೂರವೇ ಹರಿದು ಬಂದಿತು. ದೇಶಪ್ರೇಮವು ಉಕ್ಕಿ ಹರಿಯಿತು. ಮಕ್ಕಳು ತಿವ್ರರ್ಣ ಧ್ವಜದ ಚಿತ್ರವನ್ನು ಬಿಡಿಸಿ ಸಂತೋಷ ಆಚರಿಸಿರುವುದನ್ನು ಪ್ರಧಾನಿ ಮೋದಿ ಮೆಲುಕು ಹಾಕಿದರು.

'ಆತ್ಮನಿರ್ಭರ ಭಾರತ'ದಲ್ಲಿ ಈ ಕಾರ್ಯಾಚರಣೆಯ ಯಶಸ್ಸಿಗೆ ಭಾರತದ ಸ್ವದೇಶಿ ನಿರ್ಮಿತ ರಕ್ಷಣಾ ಸಾಮರ್ಥ್ಯಗಳು ಕಾರಣವಾಗಿವೆ. ದೇಶೀಯವಾಗಿ ನಿರ್ಮಿಸಿದ ಶಸ್ತ್ರಾಸ್ತ್ರಗಳು, ಉಪಕರಣಗಳು ಹಾಗೂ ತಂತ್ರಜ್ಞಾನದ ಬಲದಿಂದ ಯೋಧರು ಶೌರ್ಯ ಪ್ರದರ್ಶಿಸಿದ್ದಾರೆ ಎಂದು ಹೊಗಳಿದ್ದಾರೆ.

'ಈ ಗೆಲುವು ಸ್ವಾವಲಂಬಿ ಭಾರತದಲ್ಲಿ ಕೊಡುಗೆ ಸಲ್ಲಿಸಿದ ಪ್ರತಿಯೊಬ್ಬ ಎಂಜಿನಿಯರ್, ತಂತ್ರಜ್ಞರು ಹಾಗೂ ನಾಗರಿಕರ ಬೆವರಿನಿಂದ ಕೂಡಿದೆ' ಎಂದು ಹೇಳಿದ್ದಾರೆ.

ಮನ್ ಕೀ ಬಾತ್ ಸಂಪೂರ್ಣ ವಿಡಿಯೊ ಇಲ್ಲಿ ವೀಕ್ಷಿಸಿ: PIB India

@PIB_India
Press Information Bureau. Nodal agency for communicating to media on behalf of #Government of #India. In Hindi: For Fact Check:
New Delhipib.gov.inJoined December 2010

PIB India’s posts

Pinned
Prime Minister to visit #Gujarat on 26th and 27th May ➡️PM to lay the foundation stone and inaugurate multiple development projects worth around Rs 24,000 crore in Dahod ➡️PM to lay the foundation stone and inaugurate development projects worth over Rs 53,400
Image

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries