ಕಾಸರಗೋಡು : ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್‍ಮ ಕಾಸರಗೋಡು ತಾಲೂಕು ವತಿಯಿಂದ ಕಾಸರಗೋಡಿನಲ್ಲಿ ಮೊತ್ತಮೊದಲ ಬಾರಿಗೆ ಭಜನಾ ಕಮ್ಮಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಸಿದ್ದತಾ ಸಭೆ ಜರಗಿತು.
ಭಜನಾ ಪರಿಷತ್ ಅಧ್ಯಕ್ಷ ಡಾ. ಕೆ. ಎನ್ ವೆಂಕಟ್ರಮಣ ಹೊಳ್ಳ ಭಜನಾ ಕಮ್ಮಟದ ರೂಪು ರೇಖೆಯನ್ನು ತಯಾರಿಸಿ ಸದಸ್ಯರು ಮಾಡ ಬೇಕಾದ ಕೆಲಸಗಳ ಬಗ್ಗೆ ವಿವರಿಸಿದರು.ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್. ಪಿ. ಅಳಿಯೂರು, ಭಜನಾ ಪರಿಷತ್ ಗೌರವಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ ಮಾಹಿತಿ ನೀಡಿದರು. ಸಭೆಯಲ್ಲಿ ಮಂಜೇಶ್ವರ ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಸಂತಡ್ಕ, ಪೇಟೆ ವೆಂಕಟ್ರಮಣ ದೇವಸ್ಥಾನದ ಸಮಿತಿಯ ಪ್ರಮುಖ ಕೆ. ಎನ್.ರಾಮಕೃಷ್ಣ ಹೊಳ್ಳ ಕಾಸರಗೋಡು, ಪೇಟೆ ವೆಂಕಟ್ರಮಣ ಮಹಿಳಾ ಭಜನಾ ಸಂಘದ ಪದಾಧಿಕಾರಿಗಳು, ವಿಶ್ವಕರ್ಮ ಭಜನಾ ಸಂಘ ಪದಾಧಿಕಾರಿಗಳು, ವಿವಿಧ ಭಜನಾ ಸಂಘದ ಸದಸ್ಯರು ಹಾಗೂ ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು. ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ರೋಹಿತ್ ಮಧೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






