ಮಂಜೇಶ್ವರ: ಲಾಟರಿ ಟಿಕೆಟ್ ಮಾದರಿಯಲ್ಲಿ ಜೂಜಿನಲ್ಲಿ ನಿರತರಾಗಿದ್ದ ಇಬ್ಬರನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಕನಿಲ ನಿವಾಸಿ ಪ್ರವೀಣ್ ಕುಮರ್ ಹಾಗೂ ಆಚಾರಿಮೂಲೆ ನಿವಾಸಿ ಸಚಿನ್‍ಕುಮರ್ ಬಂಧಿತರು. ಇವರಿಂದ ಇವರಿಂದ 23240ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಹೊಸಂಗಡಿಯ ಲಾಟರಿಸ್ಟಾಲ್ ಸನಿಹದಿಂದ ಸಚಿನ್ ಕುಮರ್‍ನನ್ನು ಬಂಧಿಸಿ, ಈತನಿಂದ ಲಾಟರಿಯ ಮಾದರಿಟಿಕೆಟ್ ಹಾಗೂ ಡ್ರಾ ನಡೆಸಲು ಬಳಸುತ್ತಿದ್ದ ಸಾಮಗ್ರಿ ಹಾಗೂ 14250ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಹೊಸಂಗಡಿ ರೈಲ್ವೆ ಗೇಟ್ ಸನಿಹ ನಕಲಿ ಲಾಟರಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಪ್ರವೀನ್‍ಕುಮಾರ್‍ನನ್ನು ಬಂಧಿಸಿ, ಲಾಟರಿ ಸಾಮಗ್ರಿ ಹಾಗೂ 8990 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಟ್ಕ, ಅನಧಿಕೃತ ಜೂಜಾಟದ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಭಾರತ್‍ರೆಡ್ಡಿ ಕಠಿಣ ಕ್ರಮಕ್ಕೆ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದೆ.




