ಉಪ್ಪಳ: ಸೋಂಕಾಲ್‍ನಲ್ಲಿ ಗುಳಿಗ ಬನ ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ಹಿದಯತ್‍ನಗರ ನಿವಾಸಿ, ಆಟೋ ಚಾಲಕ ಮಹಮ್ಮದ್ ಸಿರಾಜ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. 20212 ನವೆಂಬರ್ 20ರಂದು ಘಟನೆ ನಡೆದಿದ್ದು, 21ರಂದೇ ಬಂಧಿಸಿದ್ದರು. ನಂತರ ಜಾಮೀನಿನಲ್ಲಿ ಹೊರಬಂದ ಈತ ನ್ಯಯಾಳಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನನ್ನು ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸಲಾಗಿತ್ತು. 12ವರ್ಷಗಳ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಈತನನ್ನು ಮತ್ತೆ ಬಂಧಿಸಿದ್ದಾರೆ.ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.




