ಕಾಸರಗೋಡು : ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಕನ್ನಡದ ಹಿರಿಯ ಕವಿ, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಜನ್ಮದಿನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿರುವ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಭಾಂಗಣದಲ್ಲಿ ಜರುಗಿತು.
ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ. ವಾಮನರಾವ್ ಬೇಕಲ್, ಸಂಧ್ಯಾ ರಾಣಿ ಟೀಚರ್ ದಂಪತಿ ಡಾ. ಕಯ್ಯಾರ ಅವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕøತ, ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ನುಡಿ ನಮನ ಸಲ್ಲಿಸಿ ಮತನಾಡಿ, ಕವಿ ಕಯ್ಯಾರ ಅವರು ಅಪ್ರತಿಮ ಹೋರಾಟಗಾರರು. ಪಂಪನ ಹಾಗೆ ಕವಿಯೂ ಹೌದು ಕಲಿಯೂ ಹೌದು. ಗ್ರಾಮಸ್ವರಾಜ್ಯದ ಕಲ್ಪನೆ ಸಕಾರಗೊಳಿಸಿದ ಇವರು ಏಕೀಕರಣ ಹೋರಾಟದೊಂದಿಗೆ ಸದಾ ಕನ್ನಡ ಭಾಷೆ, ಸಂಸ್ಕøತಿಗಾಗಿ ತಮ್ಮ ಜೀವನ ಮುಡಿಪಾಗಿರಿಸಿದ್ದರು. ಅವರ ಬದುಕು, ಸಾಹಿತ್ಯ, ಆದರ್ಶಗಳು ಕಾಸರಗೋಡಿನ ಕನ್ನಡಿಗರಿಗೆ ಸದಾ ದಾರಿದೀಪವಾಗಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ,ಕನ್ನಡ ಹೋರಾಟಗಾರ ಡಾ.ರಮಾನಂದ ಬನಾರಿ, ಸಾಹಿತಿ,ಭಾರತೀಯ ಪ್ರಸಾರ ಸೇವೆಯ ನಿವೃತ್ತ ಅಧಿಕಾರಿ ಡಾ.ಶಿವಾನಂದ ಬೇಕಲ್,ಕವಿ ಮಾಧ್ಯಮ ತಜ್ಞ ಡಾ.ವಸಂತ ಕುಮಾರ್ ಪೆರ್ಲ, ಕಲಬುರಗಿ ದೂರದರ್ಶನ ಕೇಂದ್ರದ ವಿಶೇಷ ಕಾರ್ಯಕ್ರಮ ಸಂಯೋಜಕ ಡಾ.ಸದಾನಂದ ಪೆರ್ಲ ಇವರಿಗೆ ಕನ್ನಡ ಭವನದ ' ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ-2025'ಪ್ರದಾನ ಮಾಡಲಾಯಿತು. ಸಾಹಿತಿ ಡಾ.ಶಿವಾನಂದ ಬೇಕಲ್ ಮತ್ತು ಕವಿ, ಮಾಧ್ಯಮ ತಜ್ಞ ಡಾ.ವಸಂತಕುಮಾರ್ ಪೆರ್ಲ ತಮಗೆ ನೀಡಿದ ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಧಾರ್ಮಿಕ ಮುಂದಾಳು ಡಾ.ವೆಂಕಟ್ರಮಣ ಹೊಳ್ಳ,ಹಿರಿಯ ಸಾಹಿತಿ ವೈ.ಸತ್ಯನಾರಾಯಣ ಕಾಸರಗೋಡು, ವಕೀಲ ಕೆ.ಸತ್ಯನಾರಾಯಣ ತಂತ್ರಿ, ಕನ್ನಡ ಭವನದ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ಉಮೇಶ ರಾವ್ ಕುಂಬಳೆ, ರಾಮಣ್ಣ ಮಾಸ್ಟರ್ ದೇಲಂಪಾಡಿ, ವಿಜಯ ಕುಮಾರ್ ಬೆಂಗಳೂರು, ಮಾಲತಿ ಬೆಂಗಳೂರು ಅತಿಥಿಗಳಾಗಿದ್ದರು.
ಖ್ಯಾತ ಗಾಯಕ,ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಪ್ರಾರ್ಥನೆ ಹಾಡಿದರು. ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ದ.ಕ ಜಿಲ್ಲಾ ಕನ್ನಡ ಭವನದ ಅಧ್ಯಕ್ಷೆ ರೇಖಾ ಸುಧೇಶ್ ರಾವ್ ವಂದಿಸಿದರು. ಬಳಿಕ ಚು.ಸಾ.ಪ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷೆ,ಕವಯತ್ರಿ ಶಾರದಾ ಮೊಳೆಯಾರ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.
ಚು.ಸಾ.ಪ ಜಿಲ್ಲಾ ಕಾರ್ಯದರ್ಶಿ ದೇವರಾಜ್ ಆಚಾರ್ಯ ಸೂರಂಬೈಲು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಯ್ಯಾರರ ಆಯ್ದ ಕವಿತೆಗಳ ಗಾಯನ, ಕೀಕಾನ ವಿಷ್ಣುಪ್ರಿಯ ಮಹಿಳಾ ಸಂಘದ ಸದಸ್ಯೆಯರಿಂದ ಕುಣಿತ ಭಜನೆ,ಅರ್ಚನಾ ಹೇರೂರು ಅವರಿಂದ ನೃತ್ಯ, , ಮೋಕ್ಷಿ ಇವರಿಂದ ಯೋಗ ಪ್ರದರ್ಶನ ನಡೆಯಿತು.






