HEALTH TIPS

ಶೇ.70ರಷ್ಟು ಭಾರತೀಯರು ಫೈಬರ್‌ ಕೊರತೆಯಿಂದ ಬಳಲುತ್ತಿದ್ದಾರೆ: ವರದಿಯಲ್ಲಿ ಬಹಿರಂಗ

ಆಶೀರ್ವಾದ್‌ ಹ್ಯಾಪಿ ಟಮ್ಮಿ ವೇದಿಕೆಯು ವಿಶ್ವ ಜೀರ್ಣಕ್ರಿಯೆ ದಿನದ ಪ್ರಯುಕ್ತ ಜೀರ್ಣಕ್ರಿಯೆ ಆರೋಗ್ಯದ ಕುರಿತು ಸಮೀಕ್ಷೆ ನಡೆಸಿದ್ದು, ಶೇ.70ರಷ್ಟು ಜನರು ದೈನಂದಿನ ಆಹಾರದಲ್ಲಿ ಫೈಬರ್‌ ಕೊರತೆ ಎದುರಿಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಐಟಿಸಿ ಫುಡ್ಸ್ - ಸ್ಟೇಪಲ್ಸ್ ಅಂಡ್ ಅಡ್ಜಸೆನ್ಸೀಸ್ ಚೀಫ್ ಆಪರೇಟಿಂಗ್ ಆಫೀಸರ್ ಅನುಜ್ ರುಸ್ತಗಿ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಸಾಕಷ್ಟು ಜನರು ಸೂಕ್ತ ಆಹಾರವನ್ನೇ ಸೇವಿಸುತ್ತಿಲ್ಲ.

ನಾವು ನಡೆಸಿದ ಆಶೀರ್ವಾದ್ ಹ್ಯಾಪಿ ಟಮ್ಮಿ ವೇದಿಕೆಯಡಿ 8 ಲಕ್ಷಕ್ಕಿಂತ ಹೆಚ್ಚಿನ ಜನರ ಸಮೀಕ್ಷೆ ನಡೆಸಿದ್ದೇವೆ. ಈ ವರದಿಯ ಪ್ರಕಾರ 1.27 ಲಕ್ಷಕ್ಕಿಂತ ಹೆಚ್ಚು ಜನರು ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು, ಶೇ.70 ರಷ್ಟು ಜನರು ಸೇವಿಸುವ ಆಹಾರದಲ್ಲಿ ನಾರಿನಾಂಶವೇ ಇರುವುದಿಲ್ಲ. ಪ್ರಮುಖವಾಗಿ ಈ ಕೊರತೆಯು ಮಹಿಳೆಯರಲ್ಲಿ ಜಾಸ್ತಿಯಿದೆ ಎಂದಿದ್ದಾರೆ.

ಶೇ. 74ರಷ್ಟು ಮಹಿಳೆಯರು ದೇಹಕ್ಕೆ ಬೇಕಾಗುವಷ್ಟು ನಾರಿನಂಶ ಸೇವಿಸುತ್ತಿಲ್ಲ. ಕಡಿಮೆ ನಾರಿನಂಶ ಸೇವಿಸುತ್ತಿರುವುದರಿಂದ ಮಲಬದ್ಧತೆಯಂತಹ ಸಾಮಾನ್ಯ ಜೀರ್ಣಕ್ರಿಯೆ ಸಮಸ್ಯೆ, ಬೊಜ್ಜು, ಟೈಪ್ 2 ಮಧುಮೇಹ ಮತ್ತು ಹೃದಯ ರಕ್ತನಾಳದ ಕಾಯಿಲೆಗಳಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಂಶೋಧನೆಗಳು ತಿಳಿಸಿವೆ.

ಇದಷ್ಟೇ ಅಲ್ಲದೆ, 78% ಜನರಿಗೆ ದಿನನಿತ್ಯ ಎಷ್ಟು ನಾರಿನಂಶ ಸೇವಿಸಬೇಕೆಂಬ ಅರಿವೇ ಇಲ್ಲ, ಶೇ. 74ರಷ್ಟು ಜನರು ನಿತ್ಯ ಬಹುಧಾನ್ಯಗಳನ್ನು ಸೇವಿಸುತ್ತಿಲ್ಲ. ಶೇ.69ರಷ್ಟು ಜನರು ದಿನವೊಂದಕ್ಕೆ 8 ಲೋಟಗಳಿಗಿಂತಲೂ ಕಡಿಮೆ ನೀರು ಕುಡಿಯುತ್ತಿದ್ದಾರೆ, ಶೇ. 46ರಷ್ಟು ಜನರು ದಿನಕ್ಕೆ 6 ಗಂಟೆಗಿಂತಲೂ ಕಡಿಮೆ ನಿದ್ರೆ ಮಾಡುತ್ತಿದ್ದಾರೆ. ಶೇ. 60ರಷ್ಟು ಜನರು ನಿತ್ಯ ದೈಹಿಕ ಚಟುವಟಿಕೆಗಳಲ್ಲಿ ಕೊರತೆ ಅನುಭವಿಸುತ್ತಿದ್ದಾರೆ ಎಂಬುದು ವರದಿಯಲ್ಲಿ ತಿಳಿದುಬಂದಿದೆ ಎಂದು ವಿವರಿಸಿದರು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries