ಕಾಸರಗೋಡು: ದಕ್ಷಿಣ ಗಾಣಗಾಪುರ ಎಂದೇ ಪ್ರಸಿದ್ಧಿ ಪಡೆದಿರುವ ಒಡಿಯೂರು ಶ್ರೀ ದತ್ತಾಂಜನೇಯ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನಾಚರಣೆಯ ಅಂಗವಾಗಿ ಹಾಗೂ ಗ್ರಾಮೋತ್ಸವದ ಬೆಳ್ಳಿ ಹಬ್ಬದ ಸ್ವಚ್ಚತಾ ಅಭಿಯಾನದ ಸಲುವಾಗಿ ಕಾಸರಗೋಡು ವಲಯ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ನಗರದ ಪಳ್ಳದ ಹಿಂದೂ ರುಧ್ರಭೂಮಿಯನ್ನು ಗುರುಬಂಧು ಸೇವಾ ಬಳಗದವರು ಶ್ರಮ ದಾನ ಮೂಲಕ ಸ್ವಚ್ಚತೆಗೊಳಿಸಿದರು.
ಈ ಕಾರ್ಯಕ್ರಮವನ್ನು ಗುರು ಬಂಧು ಸೇವಾ ಬಳಗದ ಪ್ರಮುಖರಾದ ಡಾಟ ಕೆ.ಎನ್. ವೆಂಕಟ್ರಮಣ ಹೊಳ್ಳ ವಹಿಸಿದರು, ಅವರೊಂದಿಗೆ ಸುಜಿತ್ ಪಿಲಿಕುಂಜೆ, ಅರುಣ್ ಕುಮಾರ್ ಶೆಟ್ಟಿ, ರವಿ ಕೇಸರಿ, ಗಣೇಶ್ ಬೀರಂತಬೈಲ್, ಹರೀಶ್ ಕೆ.ಆರ್, ಕೆ.ಎನ್. ರಾಮಕೃಷ್ಣ ಹೊಳ್ಳ, ಮೋಹನ ಕೊರಕ್ಕೋಡು, ದಾಮೋದರ ಭಟ್ ಅಣಂಗೂರು, ಉಮೇಶ್ ನೆಲ್ಲಿಕುಂಜೆ, ಕಿಶೋರ್ ಕುಮಾರ್ ಹಾಗೂ ಹಲವಾರು ಯುವಕರು ಸ್ವಚ್ಚತಾ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು.


