ಬದಿಯಡ್ಕ: ಬದಿಯಡ್ಕ ವಲಯದ ಪಂಚಮಿ ಜ್ಞಾನವಿಕಾಸ ಕೇಂದ್ರ ವಿದ್ಯಾಗಿರಿಯಲ್ಲಿ ಆಟಿ ಡ್ ಒಂಜಿ ದಿನ ಕಾರ್ಯಕ್ರಮ ವಿದ್ಯಾಗಿರಿ ವಿವೇಕಾನಂದ ಕ್ಲಬ್ಬಿನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾಸರಗೋಡು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಮ್, ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಜಂಟಿಯಾಗಿ ಚೆನ್ನಮಣೆ ಆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಲಾ ಯೋಜನಾಧಿಕಾರಿ ದಿನೇಶ್ ಆಟಿ ತಿಂಗಳ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಶಿವಶಂಕರ್ ನೆಕ್ರಾಜೆ, ಬದಿಯಡ್ಕ ವಲಯದ ಮೇಲ್ವಿಚಾರಕಿ ಸುಗುಣ, ಜ್ಞಾನವಿಕಾಸ ಸಮನ್ವಯಧಿಕಾರಿ ಸೌಮ್ಯ, ಸೇವಾಪ್ರತಿನಿಧಿಗಳಾದ ಕವಿತಾ, ಸುನೀತಾ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬಾಲಕೃಷ್ಣ ಶೆಟ್ಟಿ ಅವರು ಆಟಿ ತಿಂಗಳಲ್ಲಿ ಉಪಯೋಗಿಸುವ ಆಹಾರಗಳು, ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸುಮಾರು 25 ಬಗೆಯ ತಿಂಡಿ ತಿನಿಸುಗಳನ್ನು ಸದಸ್ಯರು ಮನೆಯಿಂದಲೇ ಮಾಡಿ ತಂದಿದ್ದರು.
ಆಟಿಡ್ ಒಂಜಿ ದಿನ ಕಾರ್ಯಕ್ರಮದ ಮುಖ್ಯ ಉದ್ದೇಶ ತುಳುನಾಡಿನ ಸಂಸ್ಕøತಿಯನ್ನು ಸಂರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ತಲುಪಿಸುವುದು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾ ಪ್ರದರ್ಶನಗಳು, ಸಾಂಪ್ರದಾಯಿಕ ಆಟಗಳು, ಮತ್ತು ವಿಶೇಷ ತಿನಿಸುಗಳನ್ನು ಆಯೋಜಿಸಲಾಗಿತ್ತು. ವಷರ್ಂಪತಿ ಈ ಕಾರ್ಯಕ್ರಮವನ್ನು ಪಂಚಮಿ ಜ್ಞಾನವಿಕಾಸ ಕೇಂದ್ರ ಆಯೋಜಿಸುತ್ತ ಬಂದಿರುತ್ತದೆ.


