ಕಾಸರಗೋಡು: ತಳಂಗರೆ ಸರ್ಕಾರಿ ಮುಸ್ಲಿಂ ಪ್ರೌಢಶಾಲೆಯ 75ನೇ ಬ್ಯಾಚ್‍ನ ಸುವರ್ಣ ಮಹೋತ್ಸವ ಆಚರಣೆ ಅಂಗವಾಗಿ, 'ಗ್ರೀನ್ ಕಾಸರಗೋಡು' ಯೋಜನೆಯ ಮೂರನೇ ಹಂತವನ್ನು ಮುನ್ನಾಡ್ ಪೀಪಲ್ಸ್ ಕಾಲೇಜು ಆವರಣದಲ್ಲಿ ಆರಂಭಿಸಲಾಯಿತು.
ಮುನ್ನಾಡ್ ಪೀಪಲ್ಸ್ ಕಾಲೇಜು ವಠಾರದಲ್ಲಿ ನಡೆದ ಸಮಾರಂಭದಲ್ಲಿ ಯೋಜನೆಯ ಮೂರನೇ ಹಂತದ ಉದ್ಘಾಟನೆಯನ್ನು ಕಾಸರಗೋಡು ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಇ. ಪದ್ಮಾವತಿ ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆಯ ಕಾಳಜಿ ಎಳವೆಯಿಂದಲೇ ಮೂಡಿಬರಬೇಕು. ಈ ನಿಟ್ಟಿನಲ್ಲಿ ಶಾಲಾ ಹಳೇ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ ಎಂದು ತಿಳಿಸಿದರು. ಶಾಲಾ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಾಲೇಜು ಕ್ಯಾಂಪಸ್‍ನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.
ಕಾಲೇಜು ಪ್ರಾಂಶುಪಾಲ ಸಿ.ಕೆ.ಲೂಕೋಸ್ ಅಧ್ಯಕ್ಷತೆ ವಹಿಸಿದ್ದರು. ಕರುಣಾಕರನ್ ವಿಸ್ಮಯ, ಬಶೀರ್ ವಾಲಿಬಾಲ್, ಬಿ.ಯು. ಅಬ್ದುಲ್ಲಾ, ಸಿ.ಎಲ್. ಹನೀಫ, ಸಿ.ಎಂ. ಮುಸ್ತಫಾ, ಪಿ.ಎ. ಮಜೀದ್, ಪಟ್ಲ ಮಹಮ್ಮದ್‍ಕುಞÂ ಮಾಸ್ಟರ್, ಬಿ.ಎಂ. ಅಬ್ದುಲ್ಲಾ, ಕಬೀರ್, ಅಬ್ದುಲ್ ರೆಹಮಾನ್ ಮಾಸ್ಟರ್, ಪಿ.ಎ. ಸಲಾಂ, ಸಿ.ಎಲ್. ಮಿರ್ಷಾದ್, ಕೆ.ಎಂ. ಅಬ್ದುಲ್ ಖಾದರ್, ಟಿ.ಶ್ರೀಲತಾ, ಇ.ಕೆ. ರಾಜೇಶ್, ಕೆ.ಮುರಳೀಧರನ್, ಪಾಯಂ ವಿಜಯನ್, ಕೆ.ವಿ. ಸಜಿತ್, ಎಂ.ಲತಿಕಾ, ಎಂ.ವಿನೋದ್ ಕುಮಾರ್, ಸುರೇಶ್ ಪಯ್ಯಂಗಾನಂ ಉಪಸ್ಥಿತರಿದ್ದರು. ಎಂ.ಎ.ಲತೀಫ್ ಸ್ವಾಗತಿಸಿದರು.


