ಉಪ್ಪಳ: ಶಿರಿಯ ಸನಿಹದ ಬೇರಿಕೆ ಸಮುದ್ರ ದಡದಲ್ಲಿ ಅಪರಿಚಿತ ಪುರುಷ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯನ್ವಯ ಕರಾವಳಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮಾಃಇತಿ ಸಂಗ್ರಹಿಸಿದರು. ಮೃತದೇಹಕ್ಕೆ 50ವರ್ಷ ಅಂದಾಜಿಸಲಾಗಿದ್ದು, ಮೃತದೇಹದ ಕೆಂಪು ಬಣ್ಣದ ಅಂಗಿ ಹೊಂದಿದೆ. ಸಾವು ಸಂಭವಿಸಿ ಐದು ದಿವಸ ಕಳೆದಿದ್ದು, ಮೃತವ್ಯಕ್ತಿಯ ಗುರುತು ಪತ್ತೆಗಾಗಿ ಎಲ್ಲಾ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನಿಸಲಾಗಿದೆ. ಮೃತದೇಹ ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು.

