ಕಾಸರಗೋಡು: ಮನೆಯೊಳಗೆ ಬಿದ್ದು, ಅಬೋಧಾವಸ್ಥೆಯಲ್ಲಿದ್ದ ಬೋವಿಕ್ಕಾನ ಇರಿಯಣ್ಣಿ ನಿವಾಸಿ ದಿ. ಮಹಾಲಿಂಗನ್ ಎಂಬವರ ಪುತ್ರ ಹರಿಹರನ್(36)ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹರಿಹರನ್ ಮತ್ತು ಇವರ ತಾಯಿ ಮನೆಯಲ್ಲಿ ವಾಸಿಸುತ್ತಿದ್ದು, ಎರಡು ದಿವಸಗಳ ಹಿಂದೆ ತಾಯಿ ಪಯ್ಯನ್ನೂರಿನ ಪುತ್ರಿ ಮನೆಗೆ ತೆರಳಿದ್ದು, ಹರಿಹರನ್ ಏಕಾಂಗಿಯಾಗಿ ಮನೆಯಲ್ಲಿದ್ದರು. ಈ ಮಧ್ಯೆ ಮನೆಯೊಳಗೆ ಬಿದ್ದಿದ್ದ ಇವರನ್ನು ನೆರೆಮನೆ ನಿವಾಸಿ ಹಾಗೂ ಸ್ಥಳೀಯರು ಆಸ್ಪತ್ರೆಗೆದಾಖಲಿಸಿದರೂ ಪ್ರಯೋಜನವಗಿರಲಿಲ್ಲ.

