ಸಮರಸ ಚಿತ್ರಸುದ್ದಿ: ಪೆರ್ಲ: ಪೆರ್ಲದ ಶ್ರೀ ಶಾರದಾ ಮರಾಟಿ ಸೇವಾ ಸಂಘ, ಶಾರದಾ ಮರಾಟಿ ಮಹಿಳಾ ವೇದಿಕೆ ಹಾಗೂ ಶ್ರೀ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪೆರ್ಲದ ಶ್ರೀಶಾರದಾ ಮರಾಟಿ ಭವನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸೇವಾಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣ ನಾಯ್ಕ್ ಕೂಡ್ಲು ಧ್ವಜಾರೋಹಣ ನಡೆಸಿದರು. ಪುಷ್ಪಾ ಅಮೆಕ್ಕಳ ಅಧ್ಯಕ್ಷತೆ ವಹಿಸಿದ್ದರು.


