HEALTH TIPS

ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದು ಪಾಕಿಸ್ತಾನಿಗಳೇ ಎನ್ನಲು ಸಿಕ್ಕ ಸಾಕ್ಷ್ಯಗಳಿವು..

ಶ್ರೀನಗರ: ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಮೂವರು ಉಗ್ರರು ಪಾಕಿಸ್ತಾನಿ ಪ್ರಜೆಗಳು ಎಂಬುದನ್ನು ದೃಢಪಡಿಸುವ ಸಾಕ್ಷ್ಯಗಳನ್ನು ಭದ್ರತಾ ಪಡೆಗಳು ಕಲೆಹಾಕಿವೆ.

ಏನೇನು ಸಾಕ್ಷ್ಯ ಸಂಗ್ರಹ?

ಗುರುತಿನ ಚೀಟಿ: ಉಗ್ರ ಸುಲೇಮನ್‌ ಶಾ ಹಾಗೂ ಅಬು ಹಮ್ಜಾನ ಜೇಬಿನಲ್ಲಿ ಸಿಕ್ಕಿ‌ದ್ದ ಗುರುತಿನ ಚೀಟಿಯನ್ನು ಪಾಕಿಸ್ತಾನ ಚುನಾವಣಾ ಆಯೋಗ ವಿತರಿಸಿದ್ದು ಅವು ಲಾಹೋರ್‌ (ಎನ್‌ಎ-125) ಗುಜ್ರಾನ್‌ವಾಲಾ (ಎನ್‌ಎ-79) ಪ್ರದೇಶಗಳ ಮತದಾರರ ಪಟ್ಟಿಗೆ ಸೇರಿವೆ.

ಎನ್‌ಎಡಿಆರ್‌ಎ ದಾಖಲೆ: ಉಗ್ರರ ಸ್ಯಾಟ್‌ಲೈಟ್‌ ‍ಫೋನ್‌ನ ಮೈಕ್ರೋ ಎಸ್‌ಡಿಯಲ್ಲಿದ್ದ ಎನ್‌ಎಡಿಆರ್‌ಎ ದಾಖಲೆಗಳು ಪತ್ತೆಯಾಗಿವೆ. ಈ ದಾಖಲೆಗಳಿಂದ ಉಗ್ರರ ಬೆರಳಚ್ಚು ಮುಖ ಚಹರೆ ವಿಳಾಸ ವಂಶವೃಕ್ಷದ ಮಾಹಿತಿಗಳು ಸಿಕ್ಕಿವೆ.

ಚಾಕೊಲೆಟ್‌ ಕವರ್: 'ಕ್ಯಾಂಡಿ ಲ್ಯಾಂಡ್‌' ಹಾಗೂ 'ಚೋಕೊಮ್ಯಾಕ್ಸ್‌' ಎಂಬ ಹೆಸರಿನ ಚಾಕೊಲೇಟ್ ಕವರ್‌ಗಳು ಪತ್ತೆಯಾಗಿವೆ. ಈ ಎರಡೂ ಚಾಕೊಲೆಟ್‌ಗಳು ಪಾಕಿಸ್ತಾನದ ಕರಾಚಿಯಲ್ಲಿ ಉತ್ಪಾದಿಸಲಾಗುತ್ತದೆ.

ರೈಫಲ್‌: ದಾಚಿಗಾಮ್‌ ಕಾರ್ಯಾಚರಣೆಯಲ್ಲಿ ಎಕೆ-103 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ರೈಫಲ್‌ಗಳಿಗೂ ಪೆಹಲ್ಗಾಮ್‌ ದಾಳಿಯಲ್ಲಿ ಹಾರಿಸಿದ್ದ 7.62x39 ಎಂಎಂ ಬುಲೆಟ್‌ಗಳಿಗೂ ಹೋಲಿಕೆ ಕಂಡುಬಂದಿದೆ. ಇದೇ ರೈಫಲ್‌ಗಳಿಂದಲೇ ಗುಂಡಿನ ದಾಳಿ ನಡೆದಿದೆ ಎಂಬ ತಾಂತ್ರಿಕ ಸ್ಪಷ್ಟನೆ ಸಿಕ್ಕಿದೆ.

ಜಿಪಿಎಸ್‌: ಪೆಹಲ್ಗಾಮ್‌ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ ಸ್ಥಳದಲ್ಲೇ ಉಗ್ರರು ಸಂಚರಿಸುವ ಮಾಹಿತಿಯನ್ನು ಜಿಪಿಎಸ್‌ ವೇಪಾಯಿಂಟ್‌ನಿಂದ ಮರು ಸಂಗ್ರಹಿಸಲಾಗಿದೆ.

ಧ್ವನಿ ಮಾದರಿ ಹೊಂದಾಣಿಕೆ: ದಕ್ಷಿಣ ಕಾಶ್ಮೀರದ ಲಷ್ಕರ್‌ ಉಗ್ರರ ಮುಖ್ಯಸ್ಥ ಸಾಜಿದ್‌ ಸೈಫುಲ್ಲಾ ಜಟ್‌ ಪಹಲ್ಗಾಮ್‌ ದಾಳಿಯ ಪ್ರಮುಖ ಸೂತ್ರಧಾರಿಯಾಗಿದ್ದು ಉಗ್ರರಿಂದ ವಶಪಡಿಸಿಕೊಂಡಿರುವ ಸ್ಯಾಟ್‌ಲೈಟ್ ಫೋನ್‌ನಲ್ಲಿ ಆತ ಧ್ವನಿ ಮಾದರಿಗಳು ಸಿಕ್ಕಿವೆ. ಈ ಹಿಂದಿನ ಆತನ ಧ್ವನಿ ಮಾದರಿಗೆ ಅವು ಹೋಲಿಕೆಯಾಗಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries