ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಸ್ಥಾಪಿಸಲಾದ ದಾರಿ ಸೂಚಕ ನಾಮ ಫಲಕಗಳು(ಸೈನ್‍ಬೋರ್ಡ್) ವ್ಯಾಪಕ ಲೋಪಗಳಿರುವುದಾಗಿ ದೂರಲಾಗಿದೆ. ಮೊಗ್ರಾಲ್ ಪೇಟೆಯನ್ನು ಪೆರ್ವಾಡ್ ಪೇಟೆ ಎಂದು ಬದಲಾಯಿಸಿದ ಬೋರ್ಡ್‍ಗಳು ಇದಕ್ಕೆ ದೊಡ್ಡ ಉದಾಹರಣೆಯಾಗಿದೆ.
ಕೆಲವು ಸ್ಥಳಗಳಲ್ಲಿ ಕಾಗುಣಿತ ದೋಷಗಳೂ ಇವೆ. ಅಣಂಗೂರ್ ಅನ್ನು ಅನಗೂರ್ ಎಂದು ಬರೆಯಲಾಗಿದೆ ಎಂಬುದು ಗಮನಾರ್ಹ. ಇದರ ವಿರುದ್ಧ ಸ್ಥಳೀಯರಲ್ಲಿ ವ್ಯಾಪಕ ಪ್ರತಿಭಟನೆಗಳಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮಂಜೇಶ್ವರ ಹೊಸಂಗಡಿ ಸಮೀಪ ಕನಿಲ ಪ್ರದೇಶದಲ್ಲಿ ಪೊಸೋಟ್ ಎಂಬ ನಾಮ ಫಲಕ ಒಟ್ಟು ಜನರ ದಾರಿ ತಪ್ಪಿಸಿ ಎಲ್ಲಿಗೋ ಕರೆದೊಯ್ಯುವ ಹುನ್ನಾರ ನಡೆಸಿದೆ.
ಮೊಗ್ರಾಲ್ ಪೇಟೆಯ ಹಳೆಯ ಲೀಗ್ ಆಫೀಸ್ ಬಸ್ ನಿಲ್ದಾಣದಲ್ಲಿ ಸ್ಥಾಪಿಸಲಾದ ಸೈನ್‍ಬೋರ್ಡ್‍ನಲ್ಲಿ ಮೊಗ್ರಾಲ್ ಬದಲಿಗೆ ಪೆರ್ವಾಡ್ ಎಂದು ಬರೆಯಲಾಗಿದೆ. ಈ ಬಸ್ ನಿಲ್ದಾಣಕ್ಕೆ ದಿ. ಲೀಗ್ ನಾಯಕ ಹಾಜಿ ಟಿ.ಎಂ. ಕುಂಞÂ್ಞ ಅವರ ಹೆಸರಿಡಲಾಗಿದೆ.
ಸ್ಥಳೀಯರು ಈ ಲೋಪಗಳನ್ನು ನಿರ್ಮಾಣ ಕಂಪನಿ ಅಧಿಕಾರಿಗಳ ಗಮನಕ್ಕೆ ತಂದಾಗ, ಕುಂಬಳೆ ಗ್ರಾಮ ಪಂಚಾಯತಿಗೆ ಈ ಬಗ್ಗೆ ಮಾಹಿತಿ ನೀಡಿದೆ ಎಂದು ಅವರು ಉತ್ತರಿಸಿದರು. ಆದರೆ, ಪಂಚಾಯತಿ ಅಧಿಕೃತರನ್ನು ಸಂಪರ್ಕಿಸಿದಾಗ, ನಿರ್ಮಾಣ ಕಂಪನಿ ಮಾಡಿದ ತಪ್ಪುಗಳಿಗೆ ಗ್ರಾಮ ಪಂಚಾಯತಿಯನ್ನು ದೂಷಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಇದು ಯಾರ ಮಾತನ್ನು ನಂಬಬೇಕೆಂದು ತಿಳಿಯದೆ ಸ್ಥಳೀಯರನ್ನು ಗೊಂದಲಕ್ಕೀಡು ಮಾಡಿದೆ.
ಸ್ಥಳೀಯರು ಅಥವಾ ವಾರ್ಡ್ ಸದಸ್ಯರನ್ನು ಸಂಪರ್ಕಿಸದೆ ಅನಿಯಂತ್ರಿತವಾಗಿ ಹೆಸರುಗಳನ್ನು ಮನಬಂದಂತೆ ಬರೆಯುವುದು ದೊಡ್ಡ ಪ್ರತಿಭಟನೆಗಳಿಗೆ ಕಾರಣವಾಗಿದೆ. ಅನೇಕ ಸ್ಥಳಗಳಲ್ಲಿ ಬಸ್ ಕಾಯುವ ಶೆಲ್ಟರ್‍ಗಳನ್ನು ಸ್ಥಳಾಂತರಿಸುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರ ಗುಂಪೆÇಂದು ಹಳೆಯ ಲೀಗ್ ಕಚೇರಿಯ ಬಸ್ ನಿಲ್ದಾಣವನ್ನು ಪುನಃಸ್ಥಾಪಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಮತ್ತು ನಿರ್ಮಾಣ ಕಂಪನಿ ಅಧಿಕಾರಿಗಳಿಗೆ ದೂರು ನೀಡಿದೆ. ಅವರು ಪಂಚಾಯತ್ ಅಧಿಕಾರಿಗಳನ್ನೂ ಸಂಪರ್ಕಿಸಿದ್ದಾರೆ.
ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಶೀಲಿಸುವುದಾಗಿ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಯೂತ್ ಲೀಗ್ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.
ಹೈಲೈಟ್ಸ್:
-ಬಸ್ ನಿಲ್ದಾಣಗಳ ಸ್ಥಳವನ್ನು ಬದಲಾಯಿಸಿರುವುದು ಪ್ರಯಾಣಿಕರಿಗೆ ಅನಾನುಕೂಲವಾಗಿದೆ.
-ನಿರ್ಮಾಣ ಕಂಪನಿ ಮತ್ತು ಪಂಚಾಯತಿಗಳಿಂದ ಪರಸ್ಪರ ದೂಷಣೆ
-ಹಳೆಯ ಬಸ್ ನಿಲ್ದಾಣವನ್ನು ಪುನಃಸ್ಥಾಪಿಸಲು ದೂರು ದಾಖಲು
-ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳ ಭರವಸೆ
ಅಭಿಮತ:
-ರಾ.ಹೆದ್ದಾರಿ ವ್ಯವಸ್ಥೆಗಳು ಹೆದ್ದಾರಿ ಪ್ರಾರ್ಧಇಕಾರ ಮತ್ತು ಕಾಮಗಾರಿ ಕೈಗೆತ್ತಿಕೊಂಡ ಊರಾಲುಂಗಲ್ ಸೊಸೈಟಿಗೆ ಸೃಇದ್ದು, ಗ್ರಾಮ ಪಂಚಾಯತಿಗೆ ಯಾವುದೇ ಹಕ್ಕುಗಳಿಲ್ಲ. ಈ ಬಗ್ಗೆ ಕಾಮಗಾರಿ ನಡೆಸುವ ಸಂಸ್ಥೆಯೇ ಕ್ರಮ ಕೈಗೊಳ್ಳಬೇಕು. ಸ್ಥಳ ನಾಮಗಳನ್ನು ತಪ್ಪಾಗಿ ಬರೆದು ಗೊಂದಲಗೊಳಿಸಿರುವುದು ಖಂಡನೀಯ. ಗ್ರಾ.ಪಂ. ವತಿಯಿಂದ ಈ ಬಗ್ಗೆ ಅಧಿಕ್ಥರಿಗೆ ತಿಳಿಸಲಾಗುವುದು.
-ನಾಸರ್ ಮೊಗ್ರಾಲ್.


