ತಿರುವನಂತಪುರಂ: ರಾಜ್ಯದಲ್ಲಿ ಓಣಂ ಮದ್ಯ ಮಾರಾಟದಲ್ಲಿ ದಾಖಲೆಯ ಆದಾಯ ಏರಿಕೆಯಾಗಿದೆ. ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಮದ್ಯ ಮಾರಾಟವಾಗಿದೆ ಎಂದು ವರದಿ ತಿಳಿಸಿದೆ.
ಉತ್ರಾಡಂ ದಿನದಂದು ಮಾತ್ರ 137 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ 126 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.
ಓಣಂನ ಕೊನೆಯ 10 ದಿನಗಳಲ್ಲಿ ಬೆವ್ಕೊ ಮಳಿಗೆಗಳ ಮೂಲಕ 826.38 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಇದು ಕಳೆದ ವರ್ಷಕ್ಕಿಂತ 50 ಕೋಟಿ ರೂ. ಹೆಚ್ಚು ಮದ್ಯ ಮಾರಾಟವಾಗಿದೆ.
ಉತ್ರಾಡಂ ದಿನದ(ನಿನ್ನೆ) ಮಾರಾಟದಲ್ಲಿ ಕೊಲ್ಲಂ ಜಿಲ್ಲೆ ಮುಂಚೂಣಿಯಲ್ಲಿದೆ. ಕೊಲ್ಲಂ ಜಿಲ್ಲೆಯ ಕರುನಾಗಪ್ಪಳ್ಳಿ ಮಳಿಗೆಯಲ್ಲಿ ಅತಿ ಹೆಚ್ಚು ಮದ್ಯ ಮಾರಾಟ ಮಾಡಲಾಗಿದೆ. ಇಲ್ಲಿ 1.46 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಕೊಲ್ಲಂ ಜಿಲ್ಲೆಯ ಆಶ್ರಮ ಮಳಿಗೆ 1.24 ಕೋಟಿ ರೂ. ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ಮಲಪ್ಪುರಂ ಜಿಲ್ಲೆಯ ಎಡಪ್ಪಲ್ ಔಟ್ಲೆಟ್ 1.11 ಕೋಟಿ ರೂ.ಗಳ ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ.




