HEALTH TIPS

ನಾಳೆಯಿಂದ ಅಕ್ಟೋಬರ್ ಎರಡರವರೆಗೆ ಕೊಂಡೆವೂರು ಮಠದಲ್ಲಿ ನವರಾತ್ರೋತ್ಸವ

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ನಾಳೆಯಿಂದ ಅ 02 ಗುರುವಾರದ ವರೆಗೆ ನವರಾತ್ರೋತ್ಸವವು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವುದು. ನಾಳೆ ಶ್ರೀ ಗಾಯತ್ರೀ ಮಾತೆಗೆ ಪಂಚಾಮೃತಾಭಿಷೇಕ, ಗಣಹೋಮ. 27 ರಂದು ಶ್ರೀ ಲಲಿತಾ ಪಂಚಮಿ, 28 ರಂದು ರಾತ್ರಿ 8 ರಿಂದ ಕುಲಾಲ ಸಂಘ ಪೈವಳಿಕೆಯ ನಾಟ್ಯರಂಗ ಕಲಾವೇದಿಕೆ ಕಾಯಾರ್ ಕಟ್ಟೆ ಇದರ ಮಕ್ಕಳಿಂದ ಯಕ್ಷಗಾನ ಮಹಿಷಮರ್ಧಿನಿ, 29 ರಂದು ಬೆಳಿಗ್ಗೆ 7:30 ಕ್ಕೆ ಶ್ರೀ ಶಾರದಾ ಪ್ರತಿಷ್ಠೆ, 9ಕ್ಕೆ ವಿದ್ಯಾರ್ಥಿಗಳಿಗಾಗಿ ಸರಸ್ವತೀ ಹವನ, 30 ರಂದು ದುರ್ಗಾಷ್ಟಮಿ, ಅ.01 ರಂದು ಮಹಾನವಮಿ, ಆಯುಧ ಪೂಜೆ, ವಾಹನ ಪೂಜೆ, ಬೆಳಿಗ್ಗೆ 9: ರಿಂದ "ನಾದ ನಿನಾದ" ಸಂಗೀತ ಕ್ಷೇತ್ರ ಕೊಂಡೆವೂರು ಇದರ ವಿದ್ಯಾರ್ಥಿಗಳಿಂದ ಸಂಗೀತಾರ್ಚನೆ, ಅ. 02 ರಂದು ವಿಜಯದಶಮೀ ಪ್ರಾತಃ 5:30 ರಿಂದ ಶ್ರೀ ದೇವರಿಗೆ ವಿಶೇಷ ಸೀಯಾಳ ಅಭಿಷೇಕ, 7:30 ಕ್ಕೆ ತೆನೆಪೂಜೆ,  8:ಕ್ಕೆ ವಿದ್ಯಾರಂಭ, ಪೂರ್ವಾಹ್ನ 10:30 ರಿಂದ ಸವಿಜೀವನಂ ನೃತ್ಯ ಕಲಾಕ್ಷೇತ್ರ ಕೊಂಡೆವೂರು ಇದರ ವಿದ್ಯಾರ್ಥಿಗಳಿಂದ "ನಾಟ್ಯನಮನ". ಮಧ್ಯಾಹ್ನ 12:30 ಕ್ಕೆ ಮಹಾಪೂಜೆ, ಬಳಿಕ ಶಾರದ ವಿಸರ್ಜನೆ, ಮಹಾಮಂತ್ರಾಕ್ಷತೆ ನಡೆಯಲಿರುವುದು. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.



 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries